ಮೈದುನಿಂದ ಅತ್ಯಾಚಾರ ಪ್ರಕರಣ: ಪೀಡಿತೆಯ ಬೆಂಬಲಕ್ಕೆ ನಿಂತ ಪತಿ

ಶನಿವಾರ, 18 ಏಪ್ರಿಲ್ 2015 (16:45 IST)
ತನ್ನ ಮೈದುನನಿಂದ ಅತ್ಯಾಚಾರಕ್ಕೊಳಗಾಗಿರುವ ಬೆಂಗಳೂರಿನ ಐಎಎಸ್ ಅಧಿಕಾರಿ ಪುತ್ರಿ ತಮ್ಮದು ಅಂತಧರ್ಮಿಯ ವಿವಾಹವಾಗಿದ್ದರಿಂದ ಗಂಡನ ತಂದೆತಾಯಿಗಳಿಗೆ ವಿರೋಧವಿತ್ತು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾಳೆ. 

ತಮ್ಮ ವ್ಯವಹಾರದಲ್ಲಿ ಅಪಾರ ನಷ್ಟವನ್ನು ಅನುಭವಿಸಿದ್ದ ಗಂಡನ ಅತ್ತೆ- ಮಾವ 45 ಕೋಟಿ ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದರು. ಜತೆಗೆ ಬೆಂಗಳೂರಿನಲ್ಲಿರುವ ಮನೆಯನ್ನು ಮಾರಿ ಹಣ ನೀಡುವಂತೆ ನಿನ್ನ ತಂದೆ ತಾಯಿಗಳಲ್ಲಿ ಹೇಳು ಎಂದು ಪದೇ ಪದೇ ಬಲವಂತ ಪಡಿಸುತ್ತಿದ್ದರು ಎಂದು ಆಕೆ ಆರೋಪಿಸಿದ್ದಾಳೆ. 
 
ತನ್ನ ಪತಿಯ ಹಿರಿಯ ಸಹೋದರ ಅನೇಕ ಬಾರಿ ನನ್ನನ್ನು ದೈಹಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದ. ಆದರೆ ನಾನದಕ್ಕೆ ಪ್ರತಿರೋಧ ಒಡ್ಡಿದ್ದೆ. ಆದರೆ ನವೆಂಬರ್, 11 2014ರಂದು ನಾನು 8 ತಿಂಗಳ ಗರ್ಭಿಣಿಯಾಗಿದ್ದಾಗ ಅವರು ನನ್ನ ಮೇಲೆ ಅತ್ಯಾಚಾರವೆಸಗಿದರು ಎಂದು ಪೀಡಿತೆ ದೂರಿನಲ್ಲಿ ದಾಖಲಿಸಿದ್ದಾಳೆ ಎಂದು  ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
 
ಈ ಕೃತ್ಯದ ಕುರಿತು ಯಾರಿಗಾದರು ತಿಳಿಸಿದರೆ ಆಕೆಯನ್ನು ಮತ್ತು ಆಕೆಯ ಪತಿಯನ್ನು ಕೊಲ್ಲುವುದಾಗಿ ಆರೋಪಿ ಬೆದರಿಕೆ ಒಡ್ಡಿದ್ದನಂತೆ. 
 
ಇವೆಲ್ಲ ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ ಪೀಡಿತೆಗೆ ಆಕೆಯ ಪತಿ ಬೆಂಬಲವಾಗಿ ನಿಂತಿದ್ದು, ಆತ ತನ್ನ  ಕುಟುಂಬದವರನ್ನು ತ್ಯಜಿಸಿ ಪತ್ನಿಯ ಜತೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.  
 
ಅತ್ಯಾಚಾರ ನಡೆದು 6 ತಿಂಗಳಾಗಿರುವುದರಿಂದ ಲೈಂಗಿಕ ಹಲ್ಲೆ ನಡೆದಿರುವುದನ್ನು ಪರೀಕ್ಷೆಯ ಮೂಲಕ ತಿಳಿದುಕೊಳ್ಳುವುದು ಕಷ್ಟ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ