ಸ್ಟೀಲ್ ಬ್ರಿಡ್ಜ್ ರದ್ದು; ಪರೋಕ್ಷವಾಗಿ ತಪ್ಪೊಪ್ಪಿಕೊಂಡ ಸರ್ಕಾರ

ಶುಕ್ರವಾರ, 3 ಮಾರ್ಚ್ 2017 (12:24 IST)
ಹುಬ್ಬಳ್ಳಿ: ಸ್ಟೀಲ್ ಬ್ರಿಡ್ಜ್ ಯೋಜನೆಗೆ ಸಂಬಂಧಿಸಿ ಕಿಕ್ ಬ್ಯಾಕ್ ಪಡೆದದ್ದು ಜಗಜ್ಜಾಹೀರಾಗುತ್ತದೆ ಎನ್ನುವ ಕಾರಣಕ್ಕಾಗಿ ರಾಜ್ಯ ಸರಕಾರ ಯೋಜನೆ ಕೈ ಬಿಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕುಟುಕಿದ್ದಾರೆ.
 
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸ್ಟೀಲ್ ಬ್ರಿಡ್ಜ್ ಯೋಜನೆ ಸಂಬಂಧ ಸಾವಿರಾರು ಕೋಟಿ ರು. ಕಪ್ಪ ಪಡೆದಿದ್ದಾರೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಗೋವಿಂದರಾಜ ಡೈರಿ ಪ್ರಕರಣ ಅದನ್ನು ಸಾಬೀತು ಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆತಂಕಗೊಂಡ ರಾಜ್ಯ ಸರಕಾರ ಏಕಾಏಕಿ ಯೋಜನೆಯನ್ನು ಕೈ ಬಿಟ್ಟಿದೆ. ಇದರಿಂದ ಪರೋಕ್ಷ ವಾಗಿ ಕಪ್ಪ ಪಡೆದದ್ದು ಸತ್ಯ ಎಂದು ಒಪ್ಪಿಕೊಂಡಂತಾಗಿದೆ ಎಂದರು.
 
ಕಾಂಗ್ರೆಸ್ ಹೈ ಕಮಾಂಡ್'ಗೆ ಕಪ್ಪ ನೀಡುವ ಮಾಹಿತಿ ಡೈರಿಯಿಂದ ಹೊರ ಬದ್ದಿದೆ. ಸಚಿವರಾದಿಯಾಗಿ ಮುಖ್ಯಮಂತ್ರಿಗಳು ಸಹ ಇದರಲ್ಲಿ ಶಾಮೀಲಾಗಿದ್ದಾರೆ. ಈ ಕೂಡಲೇ ಇವರೆಲ್ಲ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಿಬಿಐಗೆ ಡೈರಿ ಪ್ರಕರಣ ಒಪ್ಪಿಸಿದರೆ ಸತ್ಯಾಸತ್ಯತೆ ಸಂಪೂರ್ಣವಾಗಿ ಹೊರ ಬೀಳಲಿದೆ. ಮಾನ, ಮರ್ಯಾದೆ ಇಲ್ಲದ ದಪ್ಪ ಚರ್ಮದ ಸರಕಾರ ಭ್ರಷ್ಟ ಆಡಳಿತದಲ್ಲಿಯೇ ಮುಳುಗಿ ಬಿಟ್ಟಿದೆ ಎಂದು ಹರಿಹಾಯ್ದರು.
 

ವೆಬ್ದುನಿಯಾವನ್ನು ಓದಿ