ಬಜೆಟ್ 2017: ಕೃಷಿಕರಿಗೆ ಸಿದ್ಧರಾಮಯ್ಯ ಕೊಡುಗೆ

ಬುಧವಾರ, 15 ಮಾರ್ಚ್ 2017 (13:28 IST)
ಬೆಂಗಳೂರು: ರೈತರ ಸಾಲ ಮನ್ನಾ ಮಾಡುವ ಯೋಜನೆ ಕೈ ಬಿಟ್ಟಿರುವ ಸಿದ್ಧರಾಮಯ್ಯ ಬೇರೇ ರೀತಿಯಲ್ಲಿ ರೈತರನ್ನು ಸಂತುಷ್ಠಗೊಳಿಸಲು ಪ್ರಯತ್ನ ನಡೆಸಿದ್ದಾರೆ.

 
ಕೃಷಿ ಇಲಾಖೆಗೆ 5080 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕೃಷಿಯಲ್ಲಿ ತಾಂತ್ರಿಕತೆಗೆ ಒತ್ತು ನೀಡುವ ಕೃಷಿಕರಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಇದಕ್ಕಾಗಿ 200 ಕೋಟಿ ರೂ. ಮೀಸಲಿಡಲಾಗಿದೆ. ಬೇಸಾಯದಲ್ಲಿ ತಾಂತ್ರಿಕತೆ ಬಳಸಲು ಸಿದ್ಧರಾಮಯ್ಯ ಸರ್ಕಾರ ಪ್ರೋತ್ಸಾಹ ನೀಡಲಿದೆ.

ಇದಲ್ಲದೆ ಹನಿ ನೀರಾವರಿಗೆ ಶೇ. 90 ರಷ್ಟು ಪ್ರೋತ್ಸಾಹ ಧನ, ತೋಟಗಾರಿಕಾ ಇಲಾಖೆಗೆ 1091 ಕೋಟಿ ರೂ. ಮೀಸಲಿಡಲಾಗಿದೆ.  ಪಶು ಸಂಗೋಪನಾ ಇಲಾಖೆಗೆ 2,245 ಕೋಟಿ ರೂ. ಮೀಸಲಿಡಲಾಗಿದೆ. ಕುರಿ ಸಾಕಣೆ, ಕೋಳಿ ಸಾಕಣೆಯಂತಹ ಕೃಷಿ ಚಟುವಟಿಕೆಗಳಿಗೆ ಶೇ. 50 ರಷ್ಟು ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ