ಬಜೆಟ್ 2017: ಸಾಲ ಕೊಡ್ತಾರೆ, ಆದರೆ ಮನ್ನಾ ಮಾಡಲ್ಲ!

ಬುಧವಾರ, 15 ಮಾರ್ಚ್ 2017 (12:51 IST)
ಬೆಂಗಳೂರು: ಸರ್ಕಾರ ರೈತರಿಗೆ ಸಾಲ ಬೇಕಾದಷ್ಟು ಕೊಡುತ್ತದೆ. ಆದರೆ ಸಾಲ ಮನ್ನಾ ಮಾಡುವ ಯೋಜನೆ ಯಾವುದನ್ನೂ ಪ್ರಕಟಿಸಿಲ್ಲ.

 
ಈ ಬಾರಿಯ ಬಜೆಟ್ ನಲ್ಲಿ ಸಿಎಂ ಸಿದ್ಧರಾಮಯ್ಯ ಸಾಲ ಮನ್ನಾ ಮಾಡುತ್ತಾರೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ ಯಾಕೋ ಸಿಎಂ ಸಾಹೇಬರು ಸಾಲ ಮನ್ನಾ ಮಾಡುವ ಬದಲು ರೈತರಿಗೆ ಮತ್ತಷ್ಟು ಸಾಲ ಕೊಡುವ ಮನಸ್ಸು ಮಾಡಿದ್ದಾರೆ.

ಆದರೆ ಸಾಲ ಪಾವತಿಸಲು ಅವಧಿ ವಿಸ್ತರಣೆ ಮಾಡಿದ್ದು 31-3-2017 ರವರೆಗೆ ಕಾಲಾವಧಿ ನೀಡಲಾಗುವುದು. ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ. ವರೆಗೆ ಅಲ್ಪಾವಧಿ ಸಾಲ ಪಡೆಯಬಹುದಾಗಿದೆ. ಶೇ. 2 ಬಡ್ಡಿ ದರದಲ್ಲಿ 10 ಲಕ್ಷ ರೂ.ವರೆಗೆ ಸಾಲ ನೀಡಲಾಗುವುದು. ಅಂತೂ 25 ಲಕ್ಷ ರೈತರಿಗೆ 13,500 ಕೋಟಿ ರೂ. ಸಾಲ ನೀಡಲು ಉದ್ದೇಶಿಸಲಾಗಿದೆ ಎಂದು ಬಜೆಟ್ ನಲ್ಲಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ