ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿತ: ಕರ್ನಾಟಕದ ಐವರು ದುರ್ಮರಣ

ಮಂಗಳವಾರ, 4 ಆಗಸ್ಟ್ 2015 (13:17 IST)
50 ವರ್ಷಗಳಷ್ಟು ಹಳೆಯದಾದ ಕಟ್ಟಡವೊಂದು ಕುಸಿದ ಪರಿಣಾಮ ಕಟ್ಟಡದಲ್ಲಿದ್ದ ಕರ್ನಾಟಕ ಮೂಲದ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆ ನಗರದ ನೌಪಾಡ ಎಂಬಲ್ಲಿ ನಡೆದಿದೆ. 
 
ಘಟನೆಯಲ್ಲಿ ಒಟ್ಟು 12 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ ಐವರು ಕರ್ನಾಟಕದ ಬಂಟ್ವಾಳ ಮೂಲದವರೆಂದು ತಿಳಿದು ಬಂದಿದೆ. ಬಂಟ್ವಾಳದ ರಾಮಂದ್ರ ಪಾಂಡುರಂಗ ಭಟ್, ಮೀರಾ ಪಾಂಡುರಂಗ ಭಟ್, ರುಚಿತಾ ಪಾಂಡುರಂಗ ಭಟ್, ಸುಬ್ರಾಯ ಪಾಂಡುರಂಗಭಟ್, ಮತ್ತು ರಶ್ಮಿ ಪಾಂಡುರಂಗ ಭಟ್ ಮೃತಪಟ್ಟವರಾಗಿದ್ದಾರೆ. 
 
ಕಟ್ಟಡವು 50 ವರ್ಷಗಳಿಗೂ ಹಳೆಯದಾಗಿತ್ತು ಎನ್ನಲಾಗಿದ್ದು, ಕಟ್ಟಡವನ್ನು ತೆರವುಗೊಳಿಸುವಂತೆ ಪಾಲಿಕೆಯ ಅಧಿಕಾರಿಗಳೂ ಕೂಡ ನೋಟಿಸ್ ನೀಡಿದ್ದರು. ಆದರೆ ಮಾಲೀಕರು ಅದರ ಗೋಜಿಗೆ ಹೋಗಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಮಧ್ಯರಾತ್ರಿ 2.30ರ ವೇಳೆಯಲ್ಲಿ ಈ ಘಟನೆ ನಡೆದಿದೆ. 
 
ಇನ್ನು ಅವಶೇಷಗಳಡಿ ಸಿಲುಕಿದ್ದ 10 ಮಂದಿಯನ್ನು ವಿಪತ್ತು ನಿರ್ವಹಣಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುವ ಮೂಲಕ ರಕ್ಷಿಸಿದ್ದು, ಇನ್ನೂ ಕೆಲ ಮಂದಿ ಸಿಲುಕಿರುವ ಶಂಕೆ ವ್ಯಕ್ತಪಡಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ