ಕೆರೆ ಒತ್ತುವರಿ ತೆರವಿನ ಸಂದರ್ಭದಲ್ಲಿ ಹಿಟಾಚಿ ಮೇಲೆ ಬಿದ್ದ ಕಟ್ಟಡ

ಶುಕ್ರವಾರ, 17 ಏಪ್ರಿಲ್ 2015 (10:29 IST)
ಬೆಂಗಳೂರಿನ ಸಾರಕ್ಕಿ ಕೆರೆ ಒತ್ತುವರಿ ತೆರವಿನ ಕಾರ್ಯಾಚರಣೆ ಸಂದರ್ಭದಲ್ಲಿ ಕಟ್ಟಡವು ಸಂಪೂರ್ಣ ಕುಸಿದು ಹಿಟಾಚಿ ವಾಹನದ ಮೇಲೆ ಬಿದ್ದ ಘಟನೆ ನಡೆದಿದೆ. ಪೊಲೀಸರು ಸೇರಿ 800 ಮಂದಿ ಸಿಬ್ಬಂದಿ ಜೆಸಿಬಿ ಯಂತ್ರಗಳ ಮೂಲಕ  ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು,  ಬೆಳಿಗ್ಗೆ 7.30ರಿಂದಲೇ ತೆರವು ಕಾರ್ಯಾಚರಣೆ ಆರಂಭವಾಗಿದೆ.  

5ಕ್ಕೂ ಹೆಚ್ಚು ಜೆಸಿಬಿಗಳು ಮತ್ತು ಡ್ರಿಲ್ಲರ್ ಮೆಷಿನ್ ಮೂಲಕ ಕಾರ್ಯಾಚರಣೆ ನಡೆದಿದೆ. ಸಾರಕ್ಕಿ ಕೆರೆ ಜಾಗದಲ್ಲಿ ಪೂರ್ವಾಗ್ರಹ ಅಪಾರ್ಟ್‌ಮೆಂಟ್ ಒತ್ತುವರಿ ಮಾಡಿಕೊಂಡ 12 ಅಡಿ ಜಾಗವನ್ನು ತೆರವು ಮಾಡಲು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಅಪಾರ್ಟ್‌ಮೆಂಟ್‌ನಿಂದ ಸೀವೇಜ್ ನೀರನ್ನು ಕೆರೆಗೆ ನೇರವಾಗಿ ಬಿಡಲಾಗುತ್ತಿದ್ದು, ಸೀವೇಜ್ ಘಟಕವನ್ನು ನಿರ್ಮಿಸಿಲ್ಲ ಎಂದು ಅಧಿಕಾರಿಗಳು ದೂರಿದ್ದಾರೆ.   ಅಪಾರ್ಟ್‌ಮೆಂಟ್‌ನಲ್ಲಿ 1573 ಫ್ಲಾಟ್‌ಗಳಿವೆ. 

ವೆಬ್ದುನಿಯಾವನ್ನು ಓದಿ