ಕಾರ್ಮಿಕ ನೀತಿ ವಿರೋಧಿಸಿ ಬಂದ್: ರಾಜ್ಯದಲ್ಲಿ ಏಲ್ಲೆಲ್ಲಿ ಏನೇನು ?

ಬುಧವಾರ, 2 ಸೆಪ್ಟಂಬರ್ 2015 (12:11 IST)
ಕೇಂದ್ರ ಸರ್ಕಾರವು ಕಾರ್ಮಿಕ ಕಾಯಿದೆ ತಿದ್ದುಪಡಿಗೆ ಮುಂದಾಗಿದ್ದು, ಇದನ್ನು ವಿರೋಧಿಸಿ ಇಂದು ನಡೆಸಲಾಗುತ್ತಿರುವ ಬಂದ್‌ಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯದ ಹಲವೆಡೆ ಕೆಲ ಪರಿಣಾಮಕಾರಿ ಬೆಳವಣಿಗೆಗಳು ದಾಖಲಾಗಿವೆ. 
 
ಎಲ್ಲೆಲ್ಲಿ ಏನೇನು ?:
ಬಂದ್‌ಗೆ ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರದ ಹಲವು ಚಿತ್ರ ಮಂದಿರಗಳು ಎಂದಿನಂತೆ ಚಿತ್ರ ಪ್ರದರ್ಶನ ನಡೆಸುತ್ತಿವೆ. ಆದರೂ ಕೂಡ ಬಂದ್ ಬಿಸಿ ಚಿತ್ರಮಂದಿಗಳಿಗೂ ಕೂಡ ತಟ್ಟಿದ್ದು, ನಗರದ ಶಾಂತಲ ಚಿತ್ರಮಂದಿರದಲ್ಲಿ ಉಪ್ಪಿ 2 ಉತ್ತಮ ಪ್ರದರ್ಶನ ಕಾಣುತ್ತಿದ್ದು ಕೇವಲ ಬೆರಳೆಣಿಕೆ ಮಂದಿ ಪ್ರೇಕ್ಷಕರು ಮಾತ್ರ ಹಾಜರಾಗಿ ಚಿತ್ರ ವೀಕ್ಷಿಸಿದ್ದಾರೆ. 
 
ಅಂತೆಯೇ ಮೈಸೂರು ನಗರದ ಲೋಕಾಭಿರಾಮ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭವನ್ನು ಆಯೋಜಿಸಲಾಗಿದೆ. ಆದರೆ  ಬಂದ್ ಪರಿಣಾಮ ಈ ಶುಭ ಸಮಾರಂಭದ ಮೇಲೂ ಕೂಡ ಪರಿಣಾಮ ಬೀರಿದ್ದು, ಯಾವೊಬ್ಬ ಸಂಬಂಧಿಗರೂ ಕೂಡ ಸಮಾರಂಭದಲ್ಲಿ ಭಾಗಿಯಗಿಲ್ಲ. ಇದರಿಂದ ಮಂಟಪ ಬಿಕೋ ಎನ್ನುತ್ತಿದ್ದು, ಸರ್ಕಾರಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.  
 
ಇನ್ನು ಕಲಬುರ್ಗಿಯಲ್ಲಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವಂತೆ ಹೋಟೆಲ್ ಮಾಲೀಕರೋರ್ವರನ್ನು ಕೇಳಿಕೊಳ್ಳುತ್ತಿದ್ದ ಕಲಬುರ್ಗಿಯ ಪ್ರಾದೇಶಿಕ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಅವರ ಮೇಲೆ ಮಾಲೀಕ ಸೌಟ್‌ನಿಂದ ಹಲ್ಲೆ ನಡೆಸಿರುವ ಘಟನೆ ಕಲಬುರ್ಗಿ ನಗರದ ಹುಮ್ನಾಬಾದ್ ಹೊರವರ್ತುಲ ರಸ್ತೆ ಬಳಿ ನಡೆದಿದೆ. ಗಾಯಗೊಂಡ ಬಳಿಕವೂ ಮಾನ್ಪಡೆ ಚಿಕಿತ್ಸೆ ಪಡೆದು ಪ್ರತಿಭಟನೆಗೆ ಹಾಜರಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ