ಉದ್ಯಮಿ ಅಪಹರಣಕ್ಕೆ ಯತ್ನಿಸಿದ ಅಬಕಾರಿ ಪೇದೆ ಬಂಧನ

ಗುರುವಾರ, 20 ನವೆಂಬರ್ 2014 (12:14 IST)
ಉದ್ಯಮಿಯನ್ನು ಅಪಹರಣಕ್ಕೆ ಯತ್ನಿಸಿದ ಅಬಕಾರಿ ಪೇದೆಯನ್ನು  ವಿಶೇಷ ತನಿಖಾ ದಳ  ಬಂಧಿಸಿದೆ. ಹೈದರಾಬಾದ್ ಬಂಜಾರಾ ಹಿಲ್ಸ್ ಶೂಟ್‌‍ಔಟ್ ಕೇಸ್‌ನಲ್ಲಿ ನಿತ್ಯಾನಂದ ರೆಡ್ಡಿಯನ್ನು ಅಪಹರಿಸಿ ಒಂದು ಕೋಟಿ ರೂ.ಗೆ ಬೇಡಿಕೆ ಸಲ್ಲಿಸಲು ಓಬಳೇಶ್ ಬಯಸಿದ್ದ. ಆದರೆ ನಮ್ಮ ಇಲಾಖೆಗೆ ಸೇರಿದ ವ್ಯಕ್ತಿಯೇ ಉದ್ಯಮಿಯನ್ನು ಅಪಹರಿಸಲು ಯತ್ನಿಸಿದ್ದಾನೆಂಬ ಸಂಗತಿ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದು ಪೊಲೀಸರಿಗೆ ಶಾಕ್ ಉಂಟಾಗಿದೆ.

ಕಳೆದ 15 ದಿನಗಳಿಂದ ಓಬಳೇಶ್ ರಜೆಮೇಲಿದ್ದು, ರೆಡ್ಡಿಯನ್ನು ಯಾವ ರೀತಿ ಅಪಹರಿಸಬಹುದು, ಅವನ ಜೊತೆ ಯಾರು ಇರುತ್ತಾರೆಂಬ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದ. ಘಟನೆಯ ಬಳಿಕ ತಲೆಮರೆಸಿಕೊಳ್ಳಲು ಹೊರಟಿದ್ದ ಓಬಳೇಶ್ ಹೈದರಾಬಾದ್‌‍ನಿಂದ ಬೆಂಗಳೂರಿಗೆ ಹೊರಟಿದ್ದ. ಕರ್ನೂಲು-ಅನಂತಪುರ ಗಡಿಯಲ್ಲಿ ಬಸ್ ಅಡ್ಡಗಟ್ಟಿ ಓಬಳೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. 
 
ಕಾರಿನಲ್ಲಿ ತೆರಳುತ್ತಿದ್ದ ಅರಬಿಂದೋ ಫಾರ್ಮಾದ ಉಪಾಧ್ಯಕ್ಷ ಕೆ. ನಿತ್ಯಾನಂದ ರೆಡ್ಡಿ ಬೆಳಿಗ್ಗೆ ಬಂಜಾರಾ ಹಿಲ್ಸ್‌ನಲ್ಲಿ ವಾಯುವಿಹಾರಕ್ಕೆ ಹೊರಟಿದ್ದಾಗ, ಓಬಳೇಶ್ ತನ್ನ ಚೀಲದಿಂದ ಎಕೆ 46 ಹೊರತೆಗೆದು ರೆಡ್ಡಿಯತ್ತ ಗುರಿಹಿಡಿದಿದ್ದ. ಆಗ ರೆಡ್ಡಿ ಸೋದರ ಪ್ರಸಾದ್ ಕಾರ್‌ನತ್ತ ಧಾವಿಸಿದರು.

ಮೂರು ಗುಂಡುಗಳನ್ನು ಓಬಳೇಶ್ ಹಾರಿಸಿದ್ದ. ಇಬ್ಬರೂ ಸೇರಿ ದುಷ್ಕರ್ಮಿಯ ಜೊತೆ ಸೆಣೆಸಿದರು. ನಂತರ ಓಬಳೇಶ್ ಎಕೆ 47, ಚೀಲ ಮತ್ತು ಕೆಲವು ಬಟ್ಟೆಗಳನ್ನ ಬಿಟ್ಟು ಪರಾರಿಯಾಗಿದ್ದ. 

ವೆಬ್ದುನಿಯಾವನ್ನು ಓದಿ