ಉಪ ಚುನಾವಣೆ ಸೋಲು: ಇಂದು ಬಿಜೆಪಿ ಆತ್ಮಾವಲೋಕನ ಸಭೆ

ಬುಧವಾರ, 27 ಆಗಸ್ಟ್ 2014 (12:44 IST)
ವಿಧಾನಸಭೆ ಉಪ ಚುನಾವಣೆಯ ಸೋಲಿನ ಕುರಿತು ಬಿಜೆಪಿ ಆತ್ಮಾವಲೋಕನ ಸಭೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು ನಡೆಯಲಿದೆ.
 
ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕೇವಲ ಒಂದು ಗೆಲುವು ಕಂಡ ಬಿಜೆಪಿ, ಬಿಜೆಪಿ ಭದ್ರಕೋಟೆ ಎಂದೇ ಬಿಂಬಿಸಲಾಗಿದ್ದು ಬಳ್ಳಾರಿ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಂದೆ ಸೋಲು ಕಂಡಿತ್ತು. ಇದರಿಂದ ಬಿಜೆಪಿ ಭದ್ರಕೋಟೆ ಮುರಿದ ಕಾಂಗ್ರೆಸ್ ಎಂಬ ಹೆಸರು ಬಂದಿತು.
 
ದೇಶಾದ್ಯಂತ ಮೋದಿ ಅಲೆ ಎಂದು ಹೇಳಾಲಾಗುತ್ತಿದ್ದರೂ, ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿರುವುದರ ಕುರಿತು ಚರ್ಚಿಸಿ ಆತ್ಮಾವಲೋಕನ ಮಾಡಿಕೊಳ್ಳಲು ಬಿಜೆಪಿ ನಿರ್ಧರಿಸಿರುವ ಬಿಜೆಪಿ ಮುಖಂಡರು ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
 
ಬಿಜೆಪಿ ರಾಜ್ಯಧ್ಯಕ್ಷ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕೆ.ಎಸ್ ಈಶ್ವರಪ್ಪ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಡಿಸಿಎಂ ಆರ್ ಅಶೋಕ್, ಡಿ.ವಿ ಸದಾನಂದಗೌಡಾ ಸೇರಿದಂತೆ ಬಿಜೆಪಿ ಮುಖಂಡರು ಮತ್ತು ಸಂಸದರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ