ಸಿ ಕೆಟಗರಿ ಹರಾಜು ಪ್ರಕ್ರಿಯೆ ಪ್ರಕರಣ: ಸರ್ಕಾರಕ್ಕೆ ಸುಪ್ರೀಂ ತರಾಟೆ

ಮಂಗಳವಾರ, 31 ಮಾರ್ಚ್ 2015 (13:20 IST)
ಅಕ್ರಮ ಗಣಿಗಾರಿಕೆ ಹೆಸರಿನಡಿಯಲ್ಲಿ ಸಿ-ಕೆಟಗರಿಯಲ್ಲಿನ ಗಣಿಗಳ ಹರಾಜು ಪ್ರಕ್ರಿಯೆ ಸಂಬಂಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಜದಲ್ಲಿ ಎಷ್ಟು ಪ್ರಮಾಣದ ಅದಿರಿದೆ ಎಂದು ಪ್ರಶ್ನಿಸುವ ಮೂಲಕ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. 
 
ಅಕ್ರಮ ಗಣಿಗಾರಿಕೆ ಹೆಸರಿನಡಿಯಲ್ಲಿ ಸಿ-ಕೆಟಗರಿಯಲ್ಲಿನ ಗಣಿಗಳ ಹರಾಜು ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದ್ದು, ಈ ಕೆಟಗಿರಿಗೆ ಸೇರಿರುವ ಮಾಲೀಕರು ಮತ್ತೆ ಹರಾಜಿನಲ್ಲಿ ಸೇರಲು ಸರ್ಕಾರ ಅನುಮತಿ ನೀಡಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಕರ್ನಾಟಕ ರಾಜ್ಯದಲ್ಲಿ ಪ್ರಾಕೃತಿಕ ಸಂಪತ್ತು ಸಾಕಷ್ಟು ಲೂಟಿಯಾಗುತ್ತಿದೆ. ರಾಜದಲ್ಲಿ ಎಷ್ಟು ಪ್ರಮಾಣದ ಅದಿರಿದೆ ಎಂದು ನಿಮಗೆ ತಿಳಿದಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿತು. ಅಲ್ಲದೆ ಸರ್ಕಾರದ ವಾದಕ್ಕೆ ಅತೃಪ್ತಿಗೊಂಡ ನ್ಯಾಯಾಲಯ, ನಿಮ್ಮ ದೂರನ್ನೂ ಮುನ್ನಡೆಸಬಾರದು ಎನಿಸುತ್ತದೆ. ರಾಜ್ಯದಲ್ಲಿ ಎಷ್ಟು ಪ್ರಮಾಣದ ಅದಿರಿದೆ ಎಂದು ತಿಳಿದುಕೊಳ್ಳುವ ಕಾಳಜಿಯೂ ನಿಮ್ಮಲ್ಲಿಲ್ಲ ಎಂದು ಅತೃಪ್ತಗೊಂಡಿತು. 
 
ಬಳಿಕ, ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 10ರ ಒಳಗಾಗಿ ಸೂಕ್ತ ಉತ್ತರ ನೀಡಿ ಎಂದು ಸರ್ಕಾರಕ್ಕೆ ಸೂಚಿಸಿದ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿತು.  

ವೆಬ್ದುನಿಯಾವನ್ನು ಓದಿ