ಕಾವೇರಿಯಂತೆ ಮಹದಾಯಿಗೂ ವಿಶೇಷ ಅಧಿವೇಶನ ಕರೆಯಿರಿ

ಬುಧವಾರ, 12 ಅಕ್ಟೋಬರ್ 2016 (11:37 IST)
ಕಾವೇರಿಗಾಗಿ ವಿಶೇಷ ಅಧಿವೇಶನ ಕರೆದ ರಾಜ್ಯ ಸರಕಾರ ಮಹದಾಯಿ ವಿಷಯದ ಕುರಿತು ಚರ್ಚೆಗೂ ವಿಶೇಷ ಅಧಿವೇಶನ ಕರೆಯಬೇಕು ಎಂದು ಮಹದಾಯಿ ಹೋರಾಟಗಾರರು ಆಗ್ರಹಿಸಿದ್ದಾರೆ.
ಮಹದಾಯಿ ನೀರಿನ ಪಾಲು ಒದಗಿಸುವಲ್ಲಿ ರಾಜ್ಯ ಸರಕಾರದ ನಿರ್ಲಕ್ಷ್ಯ ಮುಂದುವರೆದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಅನಿವಾರ್ಯವಾಗಲಿದೆ. ಅಕ್ಟೋಬರ್ 21 ರಂದು ಮುಂಬೈನಲ್ಲಿ ನಡೆಯವ ಸಭೆಯಲ್ಲಿ ರಾಜ್ಯ ವ್ಯತಿರಿಕ್ತ ನಿರ್ಣಯ ಬಂದರೆ ಉತ್ತರ ಕರ್ನಾಟಕ ಹೊತ್ತಿ ಉರಿಯಲಿದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು. 
 
ಮಹದಾಯಿ ಕುರಿತು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯುವ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕ ಎನ್‌.ಎಚ್.ಕೋನರೆಡ್ಡಿ ಕರೆದ ಸಭೆಯಲ್ಲಿ ಹೋರಾಟದ ಮುಂದಿನ ರೂಪುರೇಷಗಳ ಕುರಿತು ಚರ್ಚಿಸಿ ಹಲವು ಪ್ರಮುಖ ನಿರ್ಣಯ ಕೈಗೊಳ್ಳಲಾಯಿತು. ಪ್ರತ್ಯೇಕ ಕರ್ನಾಟಕ ರಾಜ್ಯಕ್ಕಾಗಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನು ಸಭೆ ಮೂಲಕ ನೀಡಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ