ಸಮಾಜ ಒಡೆಯುವ ಶಕ್ತಿಗಳ ಬಗ್ಗೆ ಎಚ್ಚರದಿಂದಿರಬೇಕು: ಸಿದ್ದರಾಮಯ್ಯ

ಗುರುವಾರ, 2 ಅಕ್ಟೋಬರ್ 2014 (13:00 IST)
ಮಹಾತ್ಮಗಾಂಧಿ ಅಧಿಕಾರ ಮಾಡಲಿಲ್ಲ. ಲಾಲ್ ಬಹಾದ್ದೂರ್ ಶಾಸ್ತ್ರಿ ಅಧಿಕಾರದಲ್ಲಿದ್ದರು. ನೂರಕ್ಕೆ ನೂರರಷ್ಟು ಪ್ರಾಮಾಣಿಕರಾಗಿದ್ದ ರಾಜಕಾರಣಿ. ಅವರ ತತ್ವಗಳನ್ನು ಪಾಲಿಸುವುದೇ ಅವರಿಗೆ ನೀಡುವ ಗೌರವ ಎಂದು ವಿಧಾನಸೌಧದ ಆವರಣದಲ್ಲಿ  27 ಅಡಿಗಳ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ ಮಾಡುತ್ತಾ ಸಿಎಂ ಸಿದ್ದರಾಮಯ್ಯ ಹೇಳಿದರು.  

ಗಾಂಧಿ ಅವರನ್ನು ಮತಾಂಧರು ಕೊಂದು ಹಾಕಿದರು. ಈಗಲೂ ಸಮಾಜದಲ್ಲಿ ಮತಾಂಧರಿದ್ದಾರೆ. ಸಮಾಜ ಒಡೆಯುವ ಶಕ್ತಿಗಳು ಪ್ರಬಲವಾಗಿದೆ. ಅವರ ಬಗ್ಗೆ ತುಂಬಾ ಎಚ್ಚರದಿಂದಿರಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಆಡಳಿತ ಯಂತ್ರ ಮಲಗಿದೆ. ಈಗಲಾದರೂ ಎದ್ದೇಳಲಿ, ಗಾಂಧಿ ಅವರಿಗೆ ಪ್ರೇರಣೆ ನೀಡಲಿ ಎಂದು ಪರೋಕ್ಷವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 

ವೆಬ್ದುನಿಯಾವನ್ನು ಓದಿ