ಎನ್ಡಿ ಟಿವಿಗೆ ಕೇಂದ್ರ ಸರ್ಕಾರ ಒಂದು ದಿನದ ನಿಷೇಧ ಹೇರಿರುವುದಕ್ಕೆ ಪ್ರತಿಕ್ರಿಯಿಸಿ ಅಮೀನಮಟ್ಟು, ಇಂದಿರಾ ಗಾಂಧಿ ಕೊನೆ ಹೇಗಾಯಿತು ಎಂದು ಗೊತ್ತಲ್ಲ. ನಿಮ್ಮ ಮೋದಿ ಅವರ ಜತೆಯೂ ಆಗಬೇಕು ಎನ್ನುವುದು ನಿಮ್ಮ ಆಶೆಯೇ ಎಂದು ಫೇಸ್ಬುಕ್ನಲ್ಲಿ ಪ್ರಕಟಿಸಿದ್ದರು ಎಂದು ಬಿಜೆಪಿ ಯುವ ಮೋರ್ಚಾ ದೂರು ನೀಡಿದೆ.
ರಾಜ್ಯದಲ್ಲಿ ಬಿಜೆಪಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರು ವ್ಯಕ್ತ ಪಡಿಸುವ ಇಂತಹ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆಂದರೆ ಅದು ಬಹಳ ಗಂಭೀರವಾದ ವಿಷಯ. ಅವರು ಪ್ರಧಾನಿಗೆ ಬೆದರಿಕೆ ಹಾಕಿದ್ದಾರೆ ಎಂದು ಯುವಮೋರ್ಚಾ ದೂರಿನಲ್ಲಿ ಹೇಳಿದೆ.