ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸಿಬಿಐ ಕೋರ್ಟ್ ಆದೇಶ
ಶುಕ್ರವಾರ, 10 ಫೆಬ್ರವರಿ 2017 (14:09 IST)
ಧರ್ಮಸ್ಥಳದ ಉಜಿರೆಯ ಸ್`ಡಿಎಂ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆಗೆ ಸಿಬಿಐ ಕೋರ್ಟ್ ಆದೇಶಿಸಿದೆ. ಸಿಬಿಐ ಅಧಿಕಾರಿಗಳು ಸಲ್ಲಿಸಿದ್ದ ಚಾರ್ಜ್ ಶಿಟ್`ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ತನಿಖೆಗೆ ಕೋರ್ಟ್ ಆದೇಶಿಸಿದೆ.
ಸೌಜನ್ಯ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು 16 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ಚಾರ್ಜ್ ಶಿಟ್`ನಲ್ಲಿ ದೋಷ ಇದ್ದ ಬಗ್ಗೆ ಸೌಜನ್ಯ ತಂದೆ ಗುರ್ತಿಸಿದ್ದರು.
2012ರಲ್ಲಿ ಸೌಜನ್ಯರ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿತ್ತು. ಅರೆನಗ್ನ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.