ಬ್ಯಾಂಕ್ ನಿಯಮಾವಳಿ ಉಲ್ಲಂಘನೆ ಆರೋಪ: ಮಲ್ಯಾ ಮನೆ, ಕಚೇರಿ ಮೇಲೆ ಸಿಬಿಐ ದಾಳಿ

ಶನಿವಾರ, 10 ಅಕ್ಟೋಬರ್ 2015 (16:27 IST)
ಕಿಂಗ್ ಫಿಷರ್ ಏರ್‌ಲೈನ್ಸ್‌ನ್ನು ನಡೆಸುವ ಕಾರಣ ನೀಡಿ ಐಡಿಬಿಐ ಬ್ಯಾಂಕ್ 959 ಕೋಟಿ ಪಡೆದಿದ್ದು, ಬ್ಯಾಂಕಿಂಗ್ ನಿಯಮಾವಳಿಯನ್ನು ಉಲ್ಲಂಘಿಸಿದ್ದಾರೆ ಎಂಬ ಅನುಮಾನ ಹಿನ್ನೆಲೆಯಲ್ಲಿ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಏರ್‌ಲೈನ್ಸ್‌‌ನ ದೇಶದ ಎಲ್ಲಾ ಕಚೇರಿಗಳ ಮೇಲೆ ಸಿಬಿಐ ಇಂದು ಏಕಕಾಲಕ್ಕೆ ದಾಳಿ ನಡೆಸಿದೆ.  
 
ಮುಂಬೈ, ಗೋವಾ, ದೆಹಲಿ ಮತ್ತು ಬೆಂಗಳೂರಿನಲ್ಲಿರುವ ಕಿಂಗ್ ಫಿಷರ್ ಏರ್‌ಲೈನ್ಸ್‌‌ ಕಚೇರಿಗಳು ಹಾಗೂ ಮಲ್ಯಾ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು, ಏರ್‌ಲೈನ್ಸ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ. 
 
ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ ಮಲ್ಯ ಒಡೆತನದ ಕಿಂಗ್ ಫಿಷರ್ ಏರ್‌ಲೈನ್ಸ್‌ ಸಂಸ್ಥೆ ಕಳೆದ ಕೆಲ ತಿಂಗಳುಗಳಿಂದ ಸ್ಥಗಿತಗೊಂಡಿತ್ತು. ಆದರೆ ಅದನ್ನು ಮತ್ತೆ ಪುನಶ್ಚೇತನಗೊಳಿಸಿ ಮುನ್ನಡೆಸುವುದಾಗಿ ತಿಳಿಸಿ ಮಲ್ಯಾ ಅವರು ಐಡಿಬಿಐ ಬ್ಯಾಂಕ್‌ನಿಂದ 959 ಕೋಟಿ ರೂ. ಸಾಲ ಪಡೆದಿದ್ದರು. ಆದರೆ ಆ ಹಣವನ್ನು ವಿನಿಯೋಗಿಸಿಲ್ಲ. ಆದ್ದರಿಂದಲೇ ಸಂಸ್ಥೆ ಇನ್ನೂ ಕಾರ್ಯ ಆರಂಭಿಸಿಲ್ಲ. ಏನಾದರೂ ಹಣವನ್ನು ಇತರೆ ಉದ್ಯಮದಲ್ಲಿ ಹೂಡಿಕೆ ಮಾಡದರೇ ಅಥವಾ ವಿದೇಶಕ್ಕೆ ಹಣ ಸಾಗಿಸಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಬಿಐ ಬ್ಯಾಂಕ್ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣ ನೀಡಿ ದಾಳಿ ನಡೆಸಿದೆ. 

ವೆಬ್ದುನಿಯಾವನ್ನು ಓದಿ