ಡಿಕೆಶಿಗೆ ಸಿಬಿಐ ಕಪಾಳಮೋಕ್ಷ ಮಾಡಿ ಜೈಲಿಗೆ ಕಳಿಸಲಿದೆ: ಹಿರೇಮಠ್

ಶನಿವಾರ, 25 ಅಕ್ಟೋಬರ್ 2014 (16:32 IST)
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಹಗಲು ಕನಸು ಕಾಣುತ್ತಿದ್ದಾರೆ. ಡಿಕೆಶಿ ಸಿಎಂ ಆಗಲು ತಂತ್ರಗಾರಿಕೆ ಮಾಡ್ತಿದ್ದಾರೆ. ಆದರೆ ಸಿಬಿಐ ಕಪಾಳಮೋಕ್ಷ ಮಾಡಿ ಜೈಲಿಗೆ ಕಳಿಸಲಿದೆ. ಅವರನ್ನು ಜೈಲಿಗೆ ಕಳಿಸುವ ಪರಿಸ್ಥಿತಿ ಬರಲಿದೆ. ಅವರ ಅವ್ಯವಹಾರಗಳ ಬಗ್ಗೆ ಸೋನಿಯಾಗೆ ಸಿಎಂ ರಹಸ್ಯ ಪತ್ರ ಬರೆಯಲಿ ಎಂದು ಮೈಸೂರಿನಲ್ಲಿ ಸಮಾಜಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್   ಮೈಸೂರಿನಲ್ಲಿ ಹೇಳಿದ್ದಾರೆ. 

 ಡಿಕೆಶಿಯನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದೂ ಹಿರೇಮಠ್ ಒತ್ತಾಯಿಸಿದರು. ರಾಜ್ಯಪಾಲರನ್ನು ಭೇಟಿಯಾಗಿ ಈ ಕುರಿತು ಮಾತನಾಡುತ್ತೇನೆ ಎಂದೂ ಹಿರೇಮಠ್ ಹೇಳಿದರು. ಬೆಂಗಳೂರಿನಲ್ಲಿ ಡಿನೋಟಿಫಿಕೇಶನ್ ಹಗರಣಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ವಿರುದ್ಧ ಕ್ರಮ ಜರುಗಿಸುವುದಕ್ಕೆ ನೀಡಿದ್ದ ತಡೆಯನ್ನು ತೆರವು ಮಾಡುವಂತೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ.5ರಂದು ವಿಚಾರಣೆಗೆ ಎತ್ತಿಕೊಂಡಿದೆ.

ವಿಶೇಷ ಪೀಠ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್  ಮುಖ್ಯನ್ಯಾಯಮೂರ್ತಿ ಎಚ್.ಎಲ್.ದತ್ತು ತಿಳಿಸಿದ್ದಾರೆ. ಡಿಕೆಶಿ 2003ರಲ್ಲಿ 4 ಎಕರೆ 20 ಗುಂಟೆ ಭೂಮಿಯನ್ನು 1.62 ಕೋಟಿ ರೂ.ಗೆ ಖರೀದಿಸಿದ್ದರು. ಕೈಗಾರಿಕೆಗೆ ಮೀಸಲಿದ್ದ ಜಾಗವನ್ನು 2004ರಲ್ಲಿ ವಸತಿ ಭೂಮಿಯಾಗಿ ಬದಲಾಯಿಸಲಾಯಿತು. ನಂತರ 2010ರಲ್ಲಿ ಭೂಮಿಯನ್ನು ಡಿನೋಟಿಫೈ ಮೂಲಕ ಡಿಕೆಶಿ ಖರೀದಿಸಿದ್ದರು.  ಈ ಹಿನ್ನೆಲೆಯಲ್ಲಿ ಡಿಕೆಶಿಗೆ ಸಿಬಿಐ ಕಪಾಳಮೋಕ್ಷ ಮಾಡಿ ಜೈಲಿಗೆ ಕಳಿಸಲಿದ್ದಾರೆ ಎಂದು ಹಿರೇಮಠ್ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ