ಸ್ವಂತ ಖರ್ಚಿನಲ್ಲಿ ಸಿಸಿಟಿವಿ ಅಳವಡಿಸುವುದು ತಪ್ಪು: ಶ್ರೀನಿವಾಸ್ ಪ್ರಸಾದ್

ಮಂಗಳವಾರ, 3 ಮಾರ್ಚ್ 2015 (17:56 IST)
ಉಪ ವಿಭಾಗಾಧಿಕಾರಿಗಳ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಇಂದು ಪ್ರತಿಕ್ರಿಯಿಸಿದ್ದು, ಉಪ ವಿಭಾಗಾಧಿಕಾರಿಗಳು ಸರ್ಕಾರದ ಗಮನಕ್ಕೆ ತಾರದೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕರುವುದು ತಪ್ಪು ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.  
 
ಮಾಧ್ಯಮಗಲೊಂದಿಗೆ ಮಾತನಾಡಿದ ಅವರು, ಟಿ ನರಸೀಪುರದ ಕಂದಾಯ ಇಲಾಖೆ ವಿಭಾಗದಲ್ಲಿ ಉಪ ನೊಂದಾವಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಹೆಚ್.ಎಸ್. ಚೆಲುವರಾಜು ಅವರು ತಮ್ಮ ಸ್ವಂತ ಖರ್ಚಿನಲ್ಲಿ, ಅದರಲ್ಲಿಯೂ ಇಲಾಖೆಯ ಗಮನಕ್ಕೆ ತಾರದೆ ತಮ್ಮ ಕಚೇರಿಯಲ್ಲಿ ಸಿಸಿಟಿಗಳನ್ನು ಅವಡಿಸಿರುವುದು ತಪ್ಪು ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. 
 
ಇನ್ನು ಕಚೇರಿಯಲ್ಲಿ ಭ್ರಷ್ಟಾಚಾರ ಎಂಬುದುದ ತಾಂಡವವಾಡುತ್ತಿದೆ ಎಂದು ಬೇಸರಗೊಂಡಿದ್ದ ಉಪ ನೊಂದಾವಣಾಧಿಕಾರಿ ಚೆಲುವರಾಜು ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಅಲ್ಲದೆ ರಾಜೀನಾಮೆಗೂ ಮುನ್ನ ತಮ್ಮ ಕಚೇರಿಯಲ್ಲಿನ ಎಲ್ಲಾ ಚಟುವಟಿಕೆಗಳೂ ಕೂಡ ಪಾರದರ್ಶಕವಾಗಿ ನಡೆಯಬೇಕು ಎಂಬ ದೃಷ್ಟಿಯಿಂದ ಸಿಸಿಟಿವಿ ಕೇಯಾಮರಾಗಳನ್ನು ಅಳವಡಿಸಿದ್ದರು. ಇದು ತಮ್ಮ ಸ್ವಂತ ಖರ್ಚಿನಲ್ಲಿ ಅಳವಡಿಸಿದ್ದಾರೆ ಎಂದು ಚೆಲುವರಾಜು ಅವರ ಸಹೋದ್ಯೋಗಿಗಳು ಹೇಳಿಕ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರದ ಗಮನಕ್ಕೆ ತಾರದೆ ಸಿಸಿಟಿವಿಗಳನ್ನು ಅಳವಡಿಸಿದ್ದು ತಪ್ಪು ಎಂದರು. 
 
ಇನ್ನು ಕಚೇರಿಯಲ್ಲಿ ಸಿಸಿಟಿವಿ ಹಾಗೂ ಬಯೋಮೆಟ್ರಿಕ್ ಸಾಧನಗಳನ್ನು ಅಳವಡಿಸಲು ಸರ್ಕಾರದಿಂದಲೇ ಅನುಮತಿ ಬಂದಿತ್ತು. ಈ ಹಿನ್ನೆಲೆಯಲ್ಲಿಯೇ ನಾನು ಸಿಸಿಟಿವಿ ಅಳವಡಿಕೆ ಕ್ರಮ ಕೈಗೊಂಡು ಅಳವಡಿಸಿದ್ದೇನೆ. ಅಲ್ಲದೆ ನಾನು ನನ್ನ ಸ್ವಂತ ಖರ್ಚಿನಲ್ಲಿ ಅಳವಡಿಸದೆ ಸರ್ಕಾರಕ್ಕೇ ಖರ್ಚಿನ ಬಗ್ಗೆ ವಿವರ ನೀಡಿದ್ದು, ಸರ್ಕಾರದ ಖರ್ಚಿನಲ್ಲಿಯೇ ಕ್ರಮ ತೆಗೆದುಕೊಂಡಿದ್ದೆ ಎಂದು ರಾಜೀನಾಮೆ ನೀಡಿರುವ ಅಧಿಕಾರಿ ಚೆಲುವರಾಜು ಸ್ಪಷ್ಟಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ