ಕೇಂದ್ರ ಸರಕಾರದಿಂದ ವಿದ್ಯಾರ್ಥಿಗಳ ಮೇಲೆ ಬಿಜೆಪಿ, ಆರೆಸ್ಸೆಸ್ ಸಿದ್ಧಾಂತ ಹೇರುವ ಪ್ರಯತ್ನ: ಪರಮೇಶ್ವರ್

ಶನಿವಾರ, 20 ಫೆಬ್ರವರಿ 2016 (15:16 IST)
ಕೇಂದ್ರ ಸರಕಾರ ವಿದ್ಯಾರ್ಥಿ ಸಮುದಾಯಗಳ ಮೇಲೆ ಬಿಜೆಪಿ, ಆರೆಸ್ಸೆಸ್ ಸಿದ್ಧಾಂತ ಹೇರುವ ಪ್ರಯತ್ನ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ ಜಿ.ಪರಮೇಶ್ವರ್ ಆರೋಪಿಸಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದಿಂದ ಬಿಜೆಪಿ ಅಜೆಂಡಾ ಬಿತ್ತುವ ಹುನ್ನಾರ ಆರಂಭವಾಗಿದೆ. ಆದರೆ, ಜಾತ್ಯಾತೀತ ರಾಷ್ಟ್ರದಲ್ಲಿ ಯಾವುದೇ ಒಂದು ಸಂಘಟನೆಯ ಅಥವಾ ಪಕ್ಷದ ಸಿದ್ದಾಂತ ಬಿತ್ತಲು ಸಾಧ್ಯವಿಲ್ಲ ಎಂದರು.
 
ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದವರನ್ನು ಮೊದಲು ಬಂದಿಸಲಿ. ಮುಗ್ದ ವಿದ್ಯಾರ್ಥಿಗಳನ್ನು  ಬಲಿಕೊಡುವುದು ಸರಿಯಲ್ಲ. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳು ಕೇಂದ್ರ ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.
 
ಸಾರ್ ತಮ್ಮ ಹತ್ತಿರ ಎಷ್ಟು ವಾಚ್‌ಗಳಿವೆ. ಅದರ ರೇಟ್ ಎಷ್ಟು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮೊದಲಿನಿಂದಲೂ ವಾಚ್ ಹಾಕಿಕೊಳ್ಳುವುದಿಲ್ಲ ಆದ್ದರಿಂದ ಯಾವುದೇ ಸಮಸ್ಯೆ ಉದ್ಭವಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನಗೆಚಟಾಕಿ ಹಾರಿಸಿದರು.
 

ವೆಬ್ದುನಿಯಾವನ್ನು ಓದಿ