ಚಕ್ರವರ್ತಿ ಸೂಲಿಬೆಲೆ ಒಬ್ಬ ಕೋಮುವಾದಿ: ಸಿಎಂ ಪ್ರತಿಕ್ರಿಯೆ

ಗುರುವಾರ, 2 ಅಕ್ಟೋಬರ್ 2014 (14:36 IST)
ವಿಧಾನಸೌಧದ ಬಳಿ ಗಾಂಧಿ ಪ್ರತಿಮೆ ಅನಾವರಣ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸೂಲಿಬೆಲೆಯನ್ನು ಆಹ್ವಾನಿಸಿ ಅಚಾತುರ್ಯವಾಗಿದೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಹೇಳಿದ್ದಾರೆ.   ಚಕ್ರವರ್ತಿ ಸೂಲಿಬೆಲೆ ಒಬ್ಬ ಕೋಮುವಾದಿ ಎಂದೂ ಕೂಡ ಸಿಎಂ ಹೇಳಿದರು.

ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸೂಲಿಬೆಲೆ ಪ್ರತಿಮೆ ಮಾಡುವುದಕ್ಕೆ ಗಾಂಧೀಜಿ ಒಪ್ಪಿಗೆ ಇರಲಿಲ್ಲ. ಅನಾವರಣ ಮಾಡಿ ಕಾರ್ಯಕ್ರಮ ಉದ್ಘಾಟಿಸುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಚಕ್ರವರ್ತಿ ಸೂಲಿಬೆಲೆ ನೀಡಿದ ಹೇಳಿಕೆಗೆ ಗರಂ ಆಗಿರುವ ಸಿದ್ದರಾಮಯ್ಯ, ಸೂಲಿಬೆಲೆ ಒಬ್ಬ  ಕೋಮುವಾದಿ, ಕೋಮುವಾದಿ ಜೊತೆ ವೇದಿಕೆ ಹಂಚಿಕೊಂಡೆ. ಆರ್‌ಎಸ್ಎಸ್ ವ್ಯಕ್ತಿಯನ್ನು ಭಾಷಣ ಮಾಡಲು ಕರೆತಂದಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಟಿಸೋದು ಬೇಡ ಅಂತಾ ಸುಮ್ಮನಿದ್ದೆ ಎಂದು ಹೇಳಿದರು.

ಅವರು ಭಾಷಣ ಪ್ರಾರಂಭ ಮಾಡಿದ ಮೇಲೆ ಆರ್‌ಎಸ್‌ಎಸ್ ಎಂದು ಗೊತ್ತಾಯಿತು ಎಂದು ಸಿಎಂ ಹೇಳಿದ್ದರು. ಡಿ.ಎಚ್. ಶಂಕರಮೂರ್ತಿ ವಿರುದ್ಧ ಕೂಡ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.  ಸಿಎಂ ಹೇಳಿಕೆಗೆ ತಿರುಗೇಟು ನೀಡಿರುವ ಸೂಲಿಬೆಲೆ ನನ್ನನ್ನು ಕೋಮುವಾದಿ ಎನ್ನುವುದು ಸಿಎಂ ಘನತೆಗೆ ತಕ್ಕುದಲ್ಲ. ಅವರ ಹೇಳಿಕೆಗೆ ನಕ್ಕು ಸುಮ್ಮನಾಗುತ್ತೇನೆ. ಈ ಕುರಿತು ಪ್ರತಿಕ್ರಿಯಿಸಿರುವ ವೀರಪ್ಪ ಮೊಯ್ಲಿ, ಸೂಲಿಬೆಲೆ ಇರುವ ಕಡೆ ಕೋಮುಗಲಭೆ ಉಂಟಾಗುತ್ತದೆ ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ