ಮೆದುಳು ನಿಷ್ಕ್ರಿಯ ಹಿನ್ನೆಲೆ ಅಂಗಾಂಗ ದಾನ: ಜೀವಂತ ಹೃದಯ ರವಾನೆ

ಭಾನುವಾರ, 26 ಜುಲೈ 2015 (12:36 IST)
ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆಯಲ್ಲಿ ದೇಹದ ಅಂಗಾಗಂಗಳನ್ನು ದಾನ ಮಾಡಲು ವ್ಯಕ್ತಿಯೋರ್ವನ ಕುಟುಂಬಸ್ಥರು ಮುಂದಾಗಿದ್ದು, ಸಾವಿನ ದುಃಖದಲ್ಲಿಯೂ ಕೂಡ ಸಾರ್ಥಕತೆ ಮೆರೆದಿದ್ದಾರೆ. 
 
ಹೌದು, ಬೆಂಗಳೂರು ಮೂಲದ ನಿವಾಸಿ ಇಳವರಸನ್ ಎಂಬ ವ್ಯಕ್ತಿ ಕಳೆದ ಜುಲೈ 22ರಂದು ಅಪಘಾತಕ್ಕೀಡಾಗಿದ್ದ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಈತನ ಮೆದುಳು ನಿಷ್ಕ್ರಿಯವಾಗಿತ್ತು. ಆದದ್ದರಿಂದ ನಗರದ ಸಾಗರ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಆಸ್ಪತ್ರೆಯ ವೈದ್ಯರು, ಈತನನ್ನು ಉಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾವನ್ನಪ್ಪಿ ಮಣ್ಣಿನಲ್ಲಿ ಮಣ್ಣಾಗುವ ಬದಲು ಬದುಕಿರುವಾಗಲೇ ಹದೇಹದ ಅಂಗಾಗಗಳನ್ನು ದಾನ ಮಾಡುವುದು ಉತ್ತ ಎಂದು ಯೋಚಿಸಿ ದಾನಕ್ಕೆ ಮುಂದಾಗಿದ್ದಾರೆ. 
 
ನಗರದ ಬನ್ನೇರುಘಟ್ಟ ಸಾಗರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇಳವರಸನ್ ದೇಹದ ಅಂಗಾಗಗಳನ್ನು ಅಲ್ಲಿಯೇ ಬೇರ್ಪಡಿಸಲಾಗುತ್ತಿದ್ದು, ಒಂದು ಕಿಡ್ನಿಯನ್ನು ಸಾಗರ್ ಹಾಗೂ ಮತ್ತೊಂದು ಕಿಡ್ನಿಯನ್ನು ವಿಕ್ಟೋರಿಯಾ ಆಸ್ಪತ್ರೆಗ ನೀಡಲಾಗಿದೆ. ಇನ್ನು ಬಿಜಿಎಸ್ ಆಸ್ಪತ್ರೆಗೆ ಲಿವರ್ ಮತ್ತು ಲಯನ್ಸ್ ಕ್ಲಬ್‍‌ಗೆ ಎರಡೂ ಕಣ್ಣುಗಳನ್ನು ದಾನ ಮಾಡಲಾಗಿದೆ. 
 
ವಿಶೇಷವೆಂದರೆ ಜೀವಂತ ಹೈದಯವನ್ನೂ ಕೂಡ ರವಾನೆ ಮಾಡಲಾಗುತ್ತಿದ್ದು, ಸಾಗರ್ ಆಸ್ಪತ್ರೆಯಿಂದ ನಾರಾಯಣ ಹೃದಾಯಾಲಯಕ್ಕೆ ರವಾನೆ ಮಾಡಲಾಗುತ್ತಿದೆ. 
 
ಈತ ಮೂಲತಃ ತಮಿಳುನಾಡು ನಿವಾಸಿಯಾಗಿದ್ದು, ಕಳೆದ ಹಲವು ವರ್ಷಗಲಿಂದ ಬೆಂಗಳೂರಿನಲ್ಲಿಯೇ ನೆಲೆಸಸಿದ್ದ. ಅಲ್ಲದೆ ನಗರದ ವಿನಾಯಕ ಟ್ರಾನ್ಸ್‌ಪೋರ್ಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.  

ವೆಬ್ದುನಿಯಾವನ್ನು ಓದಿ