ಬೋನಿನಿಂದ ತಪ್ಪಿಸಿಕೊಂಡಿದ್ದ ಚಿರತೆ ಬನ್ನೇರುಘಟ್ಟ ಉದ್ಯಾನವನದಲ್ಲಿ ಪತ್ತೆ

ಬುಧವಾರ, 17 ಫೆಬ್ರವರಿ 2016 (12:49 IST)
ವರ್ತೂರು ಬಳಿಯ ವಿಬ್‌ಗಯಾರ್ ಶಾಲೆಗೆ ನುಗ್ಗಿ ಇಬ್ಬರನ್ನು ಗಾಯಗೊಳಿಸಿದ ಚಿರತೆಯನ್ನು ಸೆರೆಹಿಡಿಯಲಾಗಿತ್ತು. ಬೋನಿನಿಂದ ತಪ್ಪಿಸಿಕೊಂಡಿರುವ ಚಿರತೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.  ಬೋನಿನಿಂದ ತಪ್ಪಿಸಿಕೊಂಡಿದ್ದ ಚಿರತೆ  ಸುತ್ತಮುತ್ತಲ ಹಳ್ಳಿಗಳಿಗೆ ನುಗ್ಗದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟೆಚ್ಚರ ವಹಿಸಿ ಕೊನೆಗೂ ಚಿರತೆಯ ಹೆಜ್ಜೆಗುರುತಿನ ಜಾಡು ಹಿಡಿದರು.

 ಬೋನಿನಲ್ಲಿ ಪತ್ತೆಯಾದ ಚಿರತೆಯ ಹೆಜ್ಜೆಗುರುತುಗಳು ಮತ್ತು ರಾಷ್ಟ್ರೀಯ ಉದ್ಯಾನದಲ್ಲಿ ಕಂಡು ಬಂದ ಹೆಜ್ಜೆಗುರುತುಗಳು ಎರಡೂ ಒಂದೇ ಎಂದು ಪತ್ತೆಮಾಡಿರುವ ಅರಣ್ಯ ಅಧಿಕಾರಿಗಳು ಚಿರತೆ ಕಾಡಿಗೆ ಹೋಗಿರುವುದನ್ನು ದೃಢಪಡಿಸಿಕೊಂಡು ಅಧಿಕೃತವಾಗಿ ಚಿರತೆ ಶೋಧ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ.

 ಚಿರತೆ ಬನ್ನೇರು ಘಟ್ಟ ಜೈವಿಕ ಉದ್ಯಾನದಲ್ಲಿ ಬೋನಿನಿಂದ ತಪ್ಪಿಸಿಕೊಂಡಿದ್ದರಿಂದ ಸುತ್ತಮುತ್ತಲ ಗ್ರಾಮಸ್ಥರು ಆತಂಕಗೊಂಡಿದ್ದರು. ಪ್ರಸ್ತುತ ಚಿರತೆ ಬನ್ನೇರುಘಟ್ಟ ಅರಣ್ಯಕ್ಕೆ ಹೋಗಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ. 

ವೆಬ್ದುನಿಯಾವನ್ನು ಓದಿ