ಕುಮಾರಸ್ವಾಮಿ ''ಏಜಂಟ್'' ಪದ ಪ್ರಯೋಗಕ್ಕೆ ಚೆಲುವನಾರಾಯಣ ಸ್ವಾಮಿ ವಾಗ್ದಾಳಿ

ಶನಿವಾರ, 28 ನವೆಂಬರ್ 2015 (14:41 IST)
ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ ಕೆಲವು ಜೆಡಿಎಸ್  ಶಾಸಕರನ್ನು  ಕಾಂಗ್ರೆಸ್ ಪಕ್ಷದ ಏಜೆಂಟ್ ಎಂದು ಕರೆದಿರುವುದಕ್ಕೆ ಜೆಡಿಎಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಿಸಿದೆ.  ನಾವು ಯಾವ ಪಕ್ಷದ ಏಜಂಟರೂ ಅಲ್ಲ. ಯಾರಿಗೂ ಏಜಂಟರಲ್ಲ. ಕುಮಾರಸ್ವಾಮಿ ಹೀಗೆ ಲಘವಾಗಿ ಮಾತನಾಡಬಾರದು ಎಂದು ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಶಾಸಕ ಚೆಲುವನಾರಾಯಣ ಸ್ವಾಮಿ ವಾಗ್ದಾಳಿ ಮಾಡಿದರು.

 ಕುಮಾರಸ್ವಾಮಿ ನಾಯಕರಂತೆ ವರ್ತಿಸಬೇಕು. ಲಘುವಾಗಿ ಹೇಳಿಕೆಯನ್ನು ನೀಡಿ ಗೊಂದಲ ಸೃಷ್ಟಿಸಬಾರದು ಎಂದು ಸಲಹೆ ಮಾಡಿದರು.ಪಕ್ಷ ಬಿಟ್ಟು ನಮಗೆ ಸ್ವಂತ ದುಡಿಮೆ ಮಾಡುವ ಶಕ್ತಿಯಿದೆ. ಕುಮಾರಸ್ವಾಮಿ ಹೇಳಿಕೆ ತೀವ್ರ ಬೇಸರ ತರಿಸಿದೆ ಎಂದರು.    ಕಾಂಗ್ರೆಸ್ ಬಳಿ ಚರ್ಚಿಸಲು ದೇವೇಗೌಡರೇ ಸೂಚಿಸಿದ್ದರು.  ಅದರಂತೆ ನಾವು ಪರಿಷತ್ ಚುನಾವಣೆಯಲ್ಲಿ ಹೊಂದಾಣಿಕೆ ಕುರಿತು ಚರ್ಚಿಸಿದ್ದೆವು. ದೇವೇಗೌಡರು ಯಾಕೆ ಹೀಗೆ ಹೇಳಿದ್ರು ಅಂತಾ ಗೊತ್ತಾಗಲಿಲ್ಲ ಎಂದು ಹೇಳಿದರು. 
 
ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ವಿರುದ್ಧ ನಿನ್ನೆ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದ  ಕುಮಾರಸ್ವಾಮಿ ಅವರು ಯಾವ ಪಕ್ಷಕ್ಕೆ ಏಜೆಂಟ್ ಅಂತ ಗೊತ್ತಿಲ್ಲ. ಇಂತಹ ಹುಡುಗಾಟಿಕೆ ಮಾಡಿದರೆ ಶಿಸ್ತಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಮೂರು, ನಾಲ್ಕು ಜನರಿಗೋಸ್ಕರ ಪಕ್ಷವನ್ನು ಬಲಿಕೊಡಲು ಆಗುವುದಿಲ್ಲ. ಇನ್ನು ಮುಂದಿನ ದಿನಗಳಲ್ಲಿ ನಾಲ್ಕು ಗೋಡೆಗಳ ನಡುವೆ ಇಂತಹ ವಿಷಯ ಚರ್ಚೆ ಮಾಡಲಿ. ಆದರೆ ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆ ಮಾಡಿದರೆ ನಾನು ಉತ್ತರ ಕೊಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
 

ವೆಬ್ದುನಿಯಾವನ್ನು ಓದಿ