ಸಚಿವರಿಗೆ ಕೊಕ್‌: ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ಮಧ್ಯೆ ಭಿನ್ನಮತ?

ಭಾನುವಾರ, 26 ಫೆಬ್ರವರಿ 2017 (10:57 IST)
ಸಚಿವರಾಗಿ ನಾಲ್ಕು ವರ್ಷಗಳ ಪೂರೈಸಿದವರಿಗೆ ಕೊಕ್ ನೀಡುವ ಕುರಿತಂತೆ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮಧ್ಯೆ ಭಿನ್ನಮತ ತಲೆದೋರಿದೆ ಎಂದು ಮೂಲಗಳು ತಿಳಿಸಿವೆ.
 
ಇಂದು ನಡೆಯಲಿರುವ ಕೆಪಿಸಿಸಿ ಸಮನ್ವಯ ಸಮಿತಿ ಸಭೆಯಲ್ಲಿ ಸಚಿವರಿಗೆ ಕೊಕ್ ನೀಡುವ ಕುರಿತಂತೆ, ಡೈರಿ ವಿವಾದಗಳು ಉಲ್ಭಣಿಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
 
ನಾಲ್ಕು ವರ್ಷ ಸಚಿವರಾಗಿ ಸೇವೆ ಸಲ್ಲಿಸಿದವರನ್ನು ಸ್ಥಾನದಿಂದ ಕೊಕ್ ನೀಡಿ ಪಕ್ಷ ಸಂಘಟನೆ ಕಾರ್ಯಕ್ಕೆ ಬಳಸಿಕೊಳ್ಳುವುದು ವಾಡಿಕೆ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ತಾವು ಅದಕ್ಕೆ ಬದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. 
 
ಕಳೆದ ಬಾರಿ 14 ಸಚಿವರಿಗೆ ಕೊಕ್ ನೀಡಿ ಸಂಪುಟ ಪುನಾರಚನೆ ಮಾಡಲಾಗಿದೆ. ಇದೀಗ ಮತ್ತೆ ಸಚಿವ ಸಂಪುಟ ಪುನಾರಚನೆ ಸಾಧ್ಯವಿಲ್ಲ ಎನ್ನುವುದು ಸಿಎಂ ಸಿದ್ದರಾಮಯ್ಯನವರ ವಾದವಾಗಿದೆ. ಪಕ್ಷ ಸಂಘಟನೆಗೆ ನಾಲ್ಕು ವರ್ಷ ಸಚಿವರಾಗಿದ್ದವರಿಗೆ ಕೊಕ್ ಕೊಟ್ಟು, ಹೊಸಬರಿಗೆ ಅವಕಾಶ ನೀಡಬೇಕೆಂದು ಪರಮೇಶ್ವರ್ ವಾದ ಮಾಡಿದ್ದಾರೆ. 
 
ಆದರೆ ಅದು ಸಾಧ್ಯವಿಲ್ಲ. ಪಕ್ಷದ ಸಂಘಟನೆಗೆ ಅವರು ಸಚಿವರಾಗಿದ್ದೇ ಶ್ರಮಿಸುತ್ತಾರೆ. ತಮ್ಮ ಸಂಪುಟದಲ್ಲಿ ಯಾವುದೇ ಬದಲಾವಣೆ ಬೇಡ ಎಂದು ಸಿಎಂ ಹೇಳಿದ್ದಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ