ಬಾಲ್ಯ ವಿವಾಹ ತಡೆ, ‘ಕರೆ’ ವೆಬ್ ತಾಣಕ್ಕೆ ಚಾಲನೆ

ಭಾನುವಾರ, 22 ಜನವರಿ 2017 (10:24 IST)
ಬಾಲ್ಯ ವಿವಾಹ ತಡೆ ಕುರಿತ ರಾಜ್ಯ ಮಟ್ಟದ ಬೃಹತ್ ಜಾಗೃತಿ ಆಂದೋಲನ ಮತ್ತು ಆಯೋಗದಿಂದ ನೂತನವಾಗಿ ವಿನ್ಯಾಸಗೊಳಿಸಿರುವ ‘ಕರೆ’ ಅಂತರ್ಜಾಲ ತಾಣವನ್ನು ಉದ್ಘಾಟಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. 
 
ಬಾಲ್ಯ ವಿವಾಹ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಬಾಲ್ಯ ವಿವಾಹಕ್ಕೆ ಕುಮ್ಮಕ್ಕು ನೀಡುವವರನ್ನು ಎರಡು ವರ್ಷ ಶಿಕ್ಷೆಗೆ ಗುರಿಪಡಿಸುವ ಅಂಶ ತಿದ್ದುಪಡಿಯಲ್ಲಿದೆ. ಎಷ್ಟೇ ಕಾನೂನು ತಂದರೂ ಬಾಲ್ಯ ವಿವಾಹ ಕುರಿತು ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಅದಕ್ಕಿಂತ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಬೇಕು. ಜಾಗೃತಿ ಆಂದೋಲನ ನಿರಂತರವಾಗಿ ನಡೆಯಲಿ. ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕ ಬಾಲ್ಯ ವಿವಾಹ ಮುಕ್ತ ರಾಜ್ಯವಾಗಲಿ.
 
ಸಚಿವರಾದ ಉಮಾಶ್ರೀ, ಎಚ್ ಕೆ ಪಾಟೀಲ್, ರೋಷನ್ ಬೇಗ್ ಮತ್ತು ಗಣ್ಯರು ಮುಖ್ಯಮಂತ್ರಿಗಳ ಜೊತೆ ಇದ್ದರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಮಾರಂಭವನ್ನು ಆಯೋಜಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ