ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣ: ಇಬ್ಬರು ಶಂಕಿತ ಉಗ್ರರು ಪೊಲೀಸ್ ವಶಕ್ಕೆ

ಶುಕ್ರವಾರ, 27 ಫೆಬ್ರವರಿ 2015 (16:58 IST)
ಚರ್ಚ್ ಸ್ಟ್ರೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪಾಟ್ನಾದಿಂದ ಕರೆ ತಂದಿದ್ದ ಇಬ್ಬರು ಶಂಕಿತ ಉಗ್ರರನ್ನು ನಗರದ ಸಿವಿಲ್ ನ್ಯಾಯಾಲಯವು ಇಂದು ಪೊಲೀಸರ ವಶಕ್ಕೆ ಒಪ್ಪಿಸಿದೆ. 
 
ಹೈದರ್ ಅಲಿ, ಉಮರ್ ಸಿದ್ಧಿಕಿ ಎಂಬ ಶಂಕಿತ ಉಗ್ರರನ್ನು ಇಂದು ಬೆಳಗ್ಗೆ ಬಿಹಾರದ ಪಾಟ್ನಾ ಜೈಲಿನಿಂದ ಬಾಡಿ ಆರ್ಡರ್ ಮೇಲೆ ಕರೆತರಲಾಗಿತ್ತು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶರು 10 ದಿನಗಳ ಕಾಲ ಪೊಲೀಸರ ವಶಕ್ಕೊಪ್ಪಿಸಿ ತನಿಖೆಗೆ ಅನುವು ಮಾಡಿಕೊಟ್ಟಿದ್ದಾರೆ. 
 
ಇನ್ನು ಈ ಆರೋಪಿಗಳು ಶಂಕಿತ ಉಗ್ರರಾಗಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಟ್ನಾದ ಗಾಂಧಿ ಮೈದಾನದಲ್ಲಿ 2013ರ ಅ.27ರಂದು ಪ್ರಚಾರ ರ್ಯಾಲಿ ನಡೆಸುತ್ತಿದ್ದ ಸಂಧರ್ಭದಲ್ಲಿ 10 ಬಾಂಬ್ ಸ್ಫೋಟಗೊಂಡಿದ್ದವು. ಈ ವೇಳೆ, ಐವರು ಮೃತಪಟ್ಟು 83 ಮಂದಿ ಗಾಯಗೊಂಡಿದ್ದರು. ಪ್ರಕರಣ ಸಂಬಂಧ ಎನ್‍ಐಎ ಅಧಿಕಾರಿಗಳು ಹಲವು ಆರೋಪಿಗಳನ್ನು ಬಂಧಿಸಿದ್ದರು. ಈ ಪೈಕಿ ಈ ಆರೋಪಿಗಳೂ ಕೂಡ ಸೇರಿದ್ದಾರೆ. 
 
ಇದೇ ಉಗ್ರರೇ ಬೆಂಗಳೂರಿನ ಚರ್ಚ್‍ಸ್ಟ್ರೀಟ್ ಬಾಂಬ್ ಸ್ಫೋಟವನ್ನೂ ನಡೆಸಿರಬಹುದು ಎಂದು ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇವರನ್ನು ಇಂದು ಬೆಳಗ್ಗೆ ಪಾಟ್ನಾದಿಂದ ಕರೆತರಲಾಗಿದತ್ತು. ಪೊಲೀಸರೂ ಕೂಡ ಎರಡೂ ಪ್ರಕರಣಗಳಲ್ಲಿ ಸಾಮ್ಯತೆ ಕಂಡುಬರುತ್ತಿದೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ