ದಕ್ಷ ಸಿಐಡಿ ಡಿಐಜಿ ಸೋನಿಯಾ ನಾರಂಗ್ ವರ್ಗಾವಣೆ

ಶನಿವಾರ, 30 ಏಪ್ರಿಲ್ 2016 (15:43 IST)
ದ್ವಿತಿಯ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ತನಿಖೆ ನಡೆಸುತ್ತಿದ್ದ ಸಿಐಡಿ ಡಿಐಜಿ ಸೋನಿಯಾ ನಾರಂಗ್‌ರನ್ನು ಕೇಂದ್ರದ ರಾಷ್ಟ್ರೀಯ ತನಿಖಾ ದಳಕ್ಕೆ ಎತ್ತಂಗಡಿ ಮಾಡಲಾಗಿದೆ.
 
ದಕ್ಷ ಐಪಿಎಸ್ ಅಧಿಕಾರಿಯಾಗಿದ್ದ ನಾರಂಗ್, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಪ್ರಕರಣದ ತನಿಖೆ ಮುಕ್ತಾಯದ ಹಂತದಲ್ಲಿರುವಾಗಲೇ ಅವರನ್ನು ಕೇಂದ್ರಕ್ಕೆ ವರ್ಗಾಯಿಸಿರುವುದು ರಾಜ್ಯದ ಜನತೆಯಲ್ಲಿ ಅಸಮಾಧಾನ ಮೂಡಿಸಿದೆ.
 
ಹಗರಣದಲ್ಲಿ ಅಧಿಕಾರಿಗಳು ರಾಜಕಾರಣಿಗಳು ಶಾಮೀಲಾಗಿದ್ದಾರೆ ಎನ್ನುವ ವರದಿಗಳು ಕೇಳಿ ಬಂದಿದ್ದು, ಅವರ ವರ್ಗಾವಣೆಯ ಹಿಂದೆ ಪ್ರಭಾವಿ ಶಕ್ತಿಗಳ ಕೈವಾಡವಿರಬಹುದೇ ಎನ್ನುವ ಸಂದೇಹ ಎಲ್ಲರನ್ನು ಕಾಡುತ್ತಿದೆ.
 
ಸಿಐಡಿ ಇಲಾಖೆಯ ಮತ್ತೊಬ್ಬ ಹಿರಿಯ ಮಹಿಳಾ ಅಧಿಕಾರಿಯೊಬ್ಬರೊಂದಿಗಿನ ಜಟಾಪಟಿ ವರ್ಗಾವಣೆಗೆ ಕಾರಣವಾಗಿದೆಯೇ ಎನ್ನುವ ಅನುಮಾನವು ತಲೆ ಎತ್ತಿ ನಿಂತಿದೆ.
 
ಆದರೆ, ಸೋನಿಯಾ ನಾರಂಗ್‌ರನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಮುಕ್ತಾಯಗೊಂಡ ನಂತರ ಕೇಂದ್ರಕ್ಕೆ ಕಳುಹಿಸಲಾಗುವುದು ಅಥವಾ ಅದಕ್ಕಿಂತ ಮೊದಲೇ ವರ್ಗಾವಣೆಯಾಗುವುದೋ ಎನ್ನುವುದನ್ನು ಕಾದು ನೋಡಬೇಕಾಗಿದೆ.  

 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

ವೆಬ್ದುನಿಯಾವನ್ನು ಓದಿ