ಅಲೋಕ್‌ರನ್ನು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ ಸಿಐಡಿ

ಭಾನುವಾರ, 24 ಮೇ 2015 (17:41 IST)
ಒಂದಂಕಿ ಲಾಟರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪಶ್ಚಿಮ ವಲಯ ಹೆಚ್ಚವರಿ ಪೊಲೀಸ್ ಆಯುಕ್ತ ಅಲೋಕ್‌ ಕುಮಾರ್‌ ಅವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದು, 5 ಗಂಟೆಗೂ ಅಧಿಕವಾಗಿ ವಿಚಾರಣೆ ನಡೆಸಿದ್ದಾರೆ.  
 
ಬೆಳಗ್ಗೆ 11 ಗಂಟೆ ವೇಳೆಯಲ್ಲಿ ಸಿಐಡಿ ಕಚೇರಿಗೆ ಆಗಮಿಸಿದ್ದ ಅಲೋಕ್ ಕುಮಾರ್, 4.30ಕ್ಕೆ ಹೊರ ಬಂದಿದ್ದು, ನಿರಂತರವಾಗಿ 5 ಗಂಟೆಗಳ ಕಾಲ ವಿಚಾರಣಾ ಸಂಧರ್ಭದಲ್ಲಿ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ. ಇನ್ನು ಈ ವೇಳೆ ಅಲೋಕ್ ಹಲವು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ ಎಂದೂ ತಿಳಿದು ಬಂದಿದೆ. 
 
ಅಲೋಕ್‌ ಕುಮಾರ್‌ ಅವರನ್ನು ಸಿಐಡಿ ಅಧಿಕಾರಿಗಳಾದ ಸಿಐಡಿ ಎಸ್‌ಪಿ ಟಿ.ಡಿ. ಪವಾರ್ ಹಾಗೂ ಇತರೆ ಮೂವರು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. 
 
ಈ ಸುದೀರ್ಘ ವಿಚಾರಣಾ ಸಮಯದಲ್ಲಿ ಪರಿರಾಜನ್ ಜೊತೆಗಿನ ಸಂಪರ್ಕ, ಒಡನಾಟ, ಹಣಕಾಸು ವ್ಯವಹಾರ ಹಾಗೂ ಅಲೋಕ್  ಮತ್ತು ರಾಜನ್ ನಡುವೆ ಸಂಬಂಧ ಬೆಳೆದ ಬಗೆ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ