ಉಪಚುನಾವಣೆಯಲ್ಲಿ ಕೈಹಿಡಿದ ಬಳ್ಳಾರಿಗೆ ಸಿಎಂ ಬಂಪರ್ ಕೊಡುಗೆ

ಸೋಮವಾರ, 29 ಸೆಪ್ಟಂಬರ್ 2014 (16:58 IST)
ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕೈಹಿಡಿದಿದ್ದಕ್ಕೆ ಬಳ್ಳಾರಿಗೆ ಬಂಪರ್ ಕೊಡುಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಗಣಿನಾಡು ಅಭಿವೃದ್ಧಿಗೆ ಒಟ್ಟು 850 ಕೋಟಿ ರೂ. ವೆಚ್ಚದ ಯೋಜನೆಯ ಪ್ಯಾಕೇಜ್ ಸಿದ್ದರಾಮಯ್ಯ ಪ್ರಕಟಿಸಿದರು. ಗ್ರಾಮೀಣಾಭಿವೃದ್ಧಿಗೆ 50 ಕೋಟಿ ಅನುದಾನ,  ಕುಡಿಯುವ ನೀರಿಗೆ 60 ಕೋಟಿ ಅನುದಾನ.

ವಿದ್ಯುತ್‌ಗೆ 10 ಕೋಟಿ, ಅಲ್ಪಸಂಖ್ಯಾತರ ಅಭಿವೃದ್ಧಿಗೆ 13 ಕೋಟಿ, ಧಾರ್ಮಿಕ ದತ್ತಿ ಇಲಾಖೆಗೆ ಒಂದು ಕೋಟಿ ಅನುದಾನವನ್ನು ಸಿಎಂ ಘೋಷಿಸಿದರು. ಬಳ್ಳಾರಿಯಲ್ಲಿ ತಲಾ  2 ಲಕ್ಷ ರೂ. ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತದೆ.

ಬಳ್ಳಾರಿ ನಗರದಲ್ಲಿ 5500 ಮನೆಗಳನ್ನು ನಿರ್ಮಿಸಲಾಗುತ್ತದೆ. 110 ಕೋಟಿ ವೆಚ್ಚದಲ್ಲಿ 5500 ಮನೆಗಳನ್ನು ನಿರ್ಮಿಸಲಾಗುತ್ತದೆ. . ಫುಟ್ಬಾಲ್ ಸ್ಟೇಡಿಯಂ ಸಭೆಯಲ್ಲಿ ಸಿಎಂ ಮೇಲಿನ ಘೋಷಣೆ ಮಾಡಿದ್ದು, ಅನೇಕ ಸಚಿವರು ಸಭೆಯಲ್ಲಿ ಹಾಜರಿದ್ದರು. 

ವೆಬ್ದುನಿಯಾವನ್ನು ಓದಿ