ಸಿಎಂ ಸೋಮಾರಿತನದಿಂದ ಆಡಳಿತದ ಮೇಲೆ ಪರಿಣಾಮ: ಅನಂತ್

ಸೋಮವಾರ, 18 ಆಗಸ್ಟ್ 2014 (13:01 IST)
ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಲಹ ಷುರುವಾಗಿದೆ.  ಸಿಎಂ ಅವರಿಗೆ ಚುನಾವಣೆ ನಂತ್ರ ಅಧಿಕಾರ ಕಳೆದುಕೊಳ್ಳುವ ಭೀತಿಯಿದೆ. ಸಿಎಂ ವಿಚಾರವೇ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಚುನಾವಣೆ ನಂತರ ಸಿಎಂ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಭವಿಷ್ಯ ನುಡಿದಿದ್ದಾರೆ.   ಸಿದ್ದರಾಮಯ್ಯ ಸೋಮಾರಿತನದಿಂದ ಆಡಳಿತದ ಮೇಲೆ ಪರಿಣಾಮ ಬೀರಿದೆ.

ಸಿಎಂ ಮೊದಲು ತಮ್ಮ ಕಾಯಿಲೆಗೆ  ಚಿಕಿತ್ಸೆ ಪಡೆಯಲಿ ಎಂದು ಬಳ್ಳಾರಿಯಲ್ಲಿ ಅನಂತಕುಮಾರ್ ಸಿಎಂ ವಿರುದ್ಧ ವಾಗ್ದಾಳಿ ಮಾಡಿದರು. ಕಾಂಗ್ರೆಸ್ ಪಕ್ಷದಲ್ಲಿ ಮೂಲ ಕಾಂಗ್ರೆಸಿಗರು ಮತ್ತು ವಲಸೆ ಕಾಂಗ್ರೆಸಿಗರ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಸಿದ್ದರಾಮಯ್ಯ ಅವರಿಗೆ ಮೂಗುದಾರ ಹಾಕುವುದಕ್ಕಾಗಿ ಸಮನ್ವಯ ಸಮಿತಿ ರಚಿಸಲಾಗಿದೆ ಎಂಬ ವಿಷಯ ಪತ್ರಿಕೆಗಳಲ್ಲಿ ವರದಿಯಾಗಿತ್ತು.

ಇದಲ್ಲದೇ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ನೀಡುವುದಕ್ಕೆ ಸಿದ್ದರಾಮಯ್ಯ ಅಡೆತಡೆ ಒಡ್ಡಿದ್ದಾರೆ ಎಂದು ದೂರುಗಳು ಕೇಳಿಬಂದಿತ್ತು. 
 

ವೆಬ್ದುನಿಯಾವನ್ನು ಓದಿ