ಜಯಲಲಿತಾ ತಂಟೆಗೆ ಹೋಗಬೇಡಿ: ಸಿಎಂಗೆ ಈಶ್ವರಪ್ಪ ಎಚ್ಚರಿಕೆ

ಗುರುವಾರ, 24 ಜುಲೈ 2014 (16:13 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಪರಿಷತ್ತಿನಲ್ಲಿ ಮಾತನಾಡುತ್ತಾ ನೂತನ ಕೈಗಾರಿಕೆ ನೀತಿಯನ್ನು ಜಾರಿಗೆ ತರುವುದಾಗಿ ಹೇಳಿದರು. ಹೊಸ ಕೈಗಾರಿಕೆ ನೀತಿ ಜಾರಿಗೆ ಬಂದ ಬಳಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ ರಾಜ್ಯದಲ್ಲಿ ಕೈಗಾರಿಕೆಗಳ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಸಿಎಂ ತಿಳಿಸಿದರು.

 ಆಗ  ವಿಧಾನಪರಿಷತ್ತಿನ ನಾಮನಿರ್ದೇಶಿತ ಸದಸ್ಯೆ ಜಯಮಾಲಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ನೋಡಿ "ಜಯಲಲಿತಾ" ಅವರೇ ಎಂದು ಬಾಯಿ ತಪ್ಪಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಹೆಸರನ್ನು  ಸಿಎಂ ಹೇಳಿದಾಗ, ಜಯಲಲಿತಾ ತಂಟೆಗೆ ಹೋಗಬೇಡಿ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಸಿದ್ದರಾಮಯ್ಯ ಅವರಿಗೆ ಎಚ್ಚರಿಸಿದಾಗ ಸದನದಲ್ಲಿ ನಗೆಯ ಅಲೆ ಚಿಮ್ಮಿತು.

ಆಗ ಸಿದ್ದರಾಮಯ್ಯ ನಾವು ಅವರ ತಂಟೆಗೆ ಹೋಗದಿದ್ದರೂ ಅವರು ನಮ್ಮನ್ನು ಬಿಡುವುದಿಲ್ಲ, ಅವರು ನಮ್ಮ ತಂಟೆಗೆ ಬಂದೇ ಬರುತ್ತಾರೆ ಎಂದು ಸಿಎಂ ಹೇಳಿದರು.   ನಂತರ ಜಯಲಲಿತಾ ಅವರು ನಮ್ಮ ಜಿಲ್ಲೆಯವರೇ ಆಗಿದ್ದು, ಅವರ ಮೂಲ ಸ್ಥಳ ಮೇಲುಕೋಟೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ