ಮಹಿಳೆಯರ ಪರ ಭಾಷಣ ಮಾಡುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು: ಸಿಎಂ ಕಿಡಿ

ಮಂಗಳವಾರ, 21 ಮಾರ್ಚ್ 2017 (12:49 IST)
ಗೌರವಧನದ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆಯರ ನೇಮಕವಾಗಿದ್ದು, ಇದು ಕೇಂದ್ರದ ಅನುದಾನಿತ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದ ಆರಂಭದಲ್ಲಿ ಕೇಂದ್ರ ಸರ್ಕಾರ ಶೇ.90ರಷ್ಟು ಮತ್ತು ರಾಜ್ಯ ಸರ್ಕಾರ ಶೇ.10ರಷ್ಟು ವೇತನ ನೀಡುತ್ತಿತ್ತು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಅನುಪಾತವನ್ನ ಬದಲಾಯಿಸಿದ್ದು, ಶೇ. 60ರಷ್ಟು ಕೇಂದ್ರ ಮತ್ತು 40 ರಷ್ಟನ್ನ ರಾಜ್ಯಕ್ಕೆ ನೀಡಿದೆ. ಆದರೂ, ಸರ್ಕಾರ ಪ್ರತೀ ವರ್ಷ ವೇತನ ಹೆಚ್ಚಳ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರು ಮಹಿಳೆ ಮತ್ತು ಮಕ್ಕಳ ಕಾಳಜಿ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ. ಅನುಪಾತ ಬದಲಿಸಿದ ಬಗ್ಗೆ ಕೇಂದ್ರಸರ್ಕಾರವನ್ನ ಪ್ರಶ್ನಿಸಲಿ ಎಂದು ಕಿಡಿ ಕಾರಿದ್ದಾರೆ. ಸದ್ಯ ರಾಜ್ಯಸರ್ಕಾರ 5200 ರೂ. ನೀಡುತ್ತಿದ್ದು, ಕೆಂದ್ರ ಕೇವಲ 1800 ರೂ. ನೀಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಅನುಪಾತ ಬದಲಿಸುವ ಮೂಲಕ ಕೆಂದ್ರ ಸರ್ಕಾರ ತಪ್ಪು ಮಾಡಿದೆ, ಆದರೆ, ಬಿಜೆಪಿಯವರು ರಾಜ್ಯಸರ್ಕಾರವನ್ನ ದೂಷಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭ ಸಿಎಂ ಸುಳ್ಳು ಹೇಳುತ್ತಿದ್ದಾರೆ ಎಂದ ಶೆಟ್ಟರ್ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ನಿಮ್ಮ ಬಂಡವಾಳ ಬಯಲಾಯ್ತು, ಥೂ ನಿಮಗೆ ನಾಚಿಕೆ ಆಗಬೇಕು ಎಂದು ಸಿದ್ದರಾಮಯ್ಯ ಬಿಜೆಪಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.  ಸಿಎಂ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ