ವಿದ್ಯಾರ್ಥಿಗಳ ಮೊಬೈಲ್ ಕಿತ್ತು ನೀರಿಗೆ ಬಿಸಾಡಿದ ಕಾಲೇಜಿನ ಚೇರ್‌ಮನ್

ಮಂಗಳವಾರ, 2 ಸೆಪ್ಟಂಬರ್ 2014 (15:40 IST)
ಬೆಂಗಳೂರಿನ ಎಂ.ಎಸ್. ಪಾಳ್ಯದಲ್ಲಿರುವ ಶಾರದಾ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಕಾಲೇಜಿನ ಚೇರ್‌ಮನ್ ವಿದ್ಯಾರ್ಥಿಗಳ ಮೊಬೈಲ್ ಕಿತ್ತು ನೀರಿಗೆ ಬಿಸಾಡಿದ ಘಟನೆ ನಡೆದಿದೆ. ವಾಟ್ಸ್‌ಆಪ್‌ನಲ್ಲಿ  ಹೆಣ್ಣುಮಕ್ಕಳು ಮತ್ತು ಟೀಚರ್‌ಗಳ ಫೋಟೋ ತೆಗೆದು ಮಿಸ್‌ಯೂಸ್ ಮಾಡಿದ್ದೀರಿ ಎಂದು ಚೇರ್‌ಮನ್ ದೂರಿ ವಿದ್ಯಾರ್ಥಿಗಳ ಮೊಬೈಲ್‌ ಸೀದಾ ನೀರಿಗೆ ಬಿಸಾಡಿದರು.

 ಆದರೆ ಅಸಲಿ ಸಂಗತಿಯೇನೆಂದರೆ ಕಾಲೇಜಿನ ಮೂಲಸೌಲಭ್ಯಗಳ ಕೊರತೆ ಬಗ್ಗೆ ವಿದ್ಯಾರ್ಥಿಗಳು ವಿಟಿಯುಗೆ ದೂರು ನೀಡಿದ ಬಳಿಕ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳ ವಿರುದ್ಧ ಸಿಟ್ಟಿಗೆದ್ದಿತ್ತು.  ಹೋದ ವರ್ಷದಿಂದ ಕಾಲೇಜಿನಲ್ಲಿ ಸರಿಯಾಗಿ ಸೌಲಭ್ಯಗಳಿರಲಿಲ್ಲ. ಆದ್ದರಿಂದ ವಿಟಿಯುಗೆ ಪತ್ರ ಬರೆದು ವಿದ್ಯಾರ್ಥಿಗಳು ಗಮನಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

 ಸೆಕ್ಯೂರಿಟ್ ಗಾರ್ಡ್ ನಮ್ಮ ಬ್ಯಾಗ್ ಚೆಕ್ ಮಾಡಿ ನಂತರ ಒಳಕ್ಕೆ ಬಿಟ್ಟರು. ನಂತರ ಕ್ಲಾಸ್‌ರೂಂನಲ್ಲಿ ಚೆಕ್ ಮಾಡಿದಾಗ ಮೂರು ಮೊಬೈಲ್‌ಗಳು ಸಿಕ್ಕಿವೆ. ಚೇರ್‌‍ಮನ್ ಕರೆಸಿ ಈ ಫೋನ್ ಯಾರದು ಎಂದು ಕೇಳಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳು, ಟೀಚರ್‌ಗಳ ಫೋಟೋ ತೆಗೆದು ಮಿಸ್‌ಯ್ಯೂಸ್ ಮಾಡುತ್ತಿದ್ದೀರಾ ಎಂದು ಬೈದು ಅವುಗಳನ್ನು ನೀರಿಗೆ ಎಸೆದರು. ನೀರಿನಿಂದ ಮೊಬೈಲ್ ಎತ್ತಲು ಧಾವಿಸಿದ ವಿದ್ಯಾರ್ಥಿಯನ್ನು ಕಾಲೇಜಿನ ಸಿಬ್ಬಂದಿ  ಥಳಿಸಿದರು.

ವೆಬ್ದುನಿಯಾವನ್ನು ಓದಿ