ನಾಮ ನಿರ್ದೇಶಿತರಿಗೆ ಮತದಾನದ ಹಕ್ಕು ನೀಡಬಾರದು: ರಿಟ್ ಅರ್ಜಿ ಸಲ್ಲಿಕೆ

ಶನಿವಾರ, 5 ಸೆಪ್ಟಂಬರ್ 2015 (17:17 IST)
ರಾಜ್ಯ ವಿಧಾನ ಪರಿಷತ್‌ಗೆ ಸರ್ಕಾರವೇ ನೇರವಾಗಿ ನಾಮ ನಿರ್ದೇಶನ ಮಾಡಲಾಗಿರುವ ಎಲ್ಲಾ ಸದಸ್ಯರುಗಳು ಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆಯಲ್ಲಿ ಹೊಂದಿರುವ ಮತದಾನದ ಹಕ್ಕನ್ನು ಪ್ರಶ್ನಿಸಿ ಬಿಜೆಪಿ ನಾಯಕ ಗೂಳಿಹಟ್ಟಿ ಶೇಖರ್ ಹಾಗೂ ಇತರರು ಹೈಕೋರ್ಟ್‌ ಮೆಟ್ಟಿಲೇರಿದ್ದು, ತಡೆ ನೀಡುವಂತೆ ಇಂದು ರಿಟ್ ಅರ್ಜಿ ಸಲ್ಲಿಸಿದ್ದಾರೆ.  
 
ದೂರುದಾರರು, ನಾಮ ನಿರ್ದೇಶಿತರಾದ ತಾರಾ, ವಿ.ಎಸ್, ಉಗ್ರಪ್ಪ, ಜಯಮಾಲ ಅವರನ್ನು ನೇರವಾಗಿ ಅವರ ಸಾಧನೆಯನ್ನು ಪರಿಗಣಿಸಿ ಸರ್ಕಾರವೇನೇರವಾಗಿ ಆರಿಸಿದೆ. ಆದರೆ ಅವರು ಜನತೆಯನ್ನು ಪ್ರತಿನಿಧಿಸುವಂತಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಮೇಯರ್ ಚುನಾವಣಾ ಸಂದರ್ಭದಲ್ಲಿರುವ ಮತದಾನದ ಹಕ್ಕನ್ನು ನೀಡಬಾರದು ಎಂದು ತಮ್ಮ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ. 
 
ಇನ್ನು ಸಂಸದರಾದ ವೀರಪ್ಪ ಮೊಯ್ಲಿ ಮತ್ತು ಡಿ.ಕೆ.ಸುರೇಶ್ ಅವರೂ ಕೂಡ ಮತದಾನ ಮಾಡುವ ಹಕ್ಕನ್ನು ಹೊಂದಿದ್ದು, ಅವರಿಗೂ ಕೂಡ ಮತದಾನದ ಹಕ್ಕನ್ನು ನೀಡಬಾರದು ಎಂದು ಮನವಿ ಮಾಡಿರುವ ದೂರು ದಾರರು, ಅವರು ಜನತೆಯನ್ನು ಪ್ರತಿನಿಧಿಸಿದರೂ ಕೂಡ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಜನತೆಗಿಂತ ಹೆಚ್ಚಾಗಿ ಇತೆರೆ ಜಿಲ್ಲೆಗಳ ಜನ ಸಮೂಹವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೂ ಕೂಡ ಮತದಾನದ ಹಕ್ಕನ್ನು ನೀಡಬಾರದು ಎಂದು ಮನವಿ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ