ರಾಘವೇಶ್ವರ ಶ್ರೀಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲು

ಬುಧವಾರ, 1 ಅಕ್ಟೋಬರ್ 2014 (19:09 IST)
ಶ್ರೀರಾಮಚಂದ್ರಾಪುರದ ಮಠದ ಸ್ವಾಮೀಜಿ ರಾಘವೇಶ್ವರ ಭಾರತಿ ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿದೆ. ಮಹಿಳಾ ಆಯೋಗ ಈ ಪ್ರಕರಣದ ತನಿಖೆಗೆ ತನಿಖಾ ತಂಡವನ್ನು ನೇಮಿಸಿದ್ದು, ಒಂದೆರಡು ದಿನಗಳಲ್ಲಿ ತನಿಖಾ ತಂಡ ದೂರುದಾರರನ್ನು ಭೇಟಿ ನೀಡಿ ಮಹಿಳೆಯ ಜೊತೆ ಚರ್ಚಿಸಲಿದೆ.

ರಾಘವೇಶ್ವರ ಭಾರತೀ ಶ್ರೀಗಳನ್ನು ಬಂಧಿಸದಂತೆ ಹೈಕೋರ್ಟ್ ಈಗಾಗಲೇ ಸೂಚನೆ ನೀಡಿದೆ ಮತ್ತು ರಾಘವೇಶ್ವರ ಶ್ರೀಗಳ ವಿರುದ್ಧ ಯಾವುದೇ ಹೇಳಿಕೆ ನೀಡಬಾರದು ಎಂದು ಸೂಚಿಸಿದೆ. ಆದ್ದರಿಂದ ಅಗತ್ಯಬಿದ್ದರೆ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಲು ಕೂಡ ಅದು ಸಿದ್ಧವಾಗಿದೆ.

ಲಲಿತಾ ಕುಮಾರಮಂಗಳಂ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡು ಕೇವಲ ಮೂರುದಿನಗಳಲ್ಲಿ ಈ ಬೆಳವಣಿಗೆ ಉಂಟಾಗಿದೆ. ಮಹಿಳೆಗೆ ಜೀವಬೆದರಿಕೆ ಹಾಕಿರುವ ಬಗ್ಗೆ ಮಾಹಿತಿಯನ್ನು ತನಿಖಾ ತಂಡ ಕಲೆಹಾಕಲಿದ್ದು, ರಾಜ್ಯ ಮಹಿಳಾ ಆಯೋಗಕ್ಕೆ ವರದಿ ಸಲ್ಲಿಸಲಿದೆ. 

ವೆಬ್ದುನಿಯಾವನ್ನು ಓದಿ