ಬಿಬಿಎಂಪಿ ಮೈತ್ರಿ ವಿಚಾರ: ಜಮೀರ್-ಪರಮೇಶ್ವರ್ ಮಾತಕತೆ

ಭಾನುವಾರ, 6 ಸೆಪ್ಟಂಬರ್ 2015 (13:52 IST)
ಬಿಬಿಎಂಪಿ ಗದ್ದುಗೆ ಏರಲು ಈಗಾಗಲೇ ಮೈತ್ರಿ ಗಟ್ಟಿಗೊಂಡಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಅವರು ಇಂದು ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 
 
ಮೈತ್ರಿಗೆ ಸಂಬಂಧಿಸಿದಂತೆ ಜಮೀರ್ ಅವರು ನಗರದ ಸದಾಶಿವನಗರದ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿದ್ದು, ಮಾತುಕತೆ ನಡೆಸಿದರು. ಆದರೆ ಯಾವ ಯಾವ ವಿಷಯಗಳ ಸಂಬಂಧ ಚರ್ಚಿಸಿದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 
 
ಇನ್ನು ಮೈತ್ರಿ ಬಗ್ಗೆಯ ಮಾತುಕತೆ ನಡೆಸುವ ಹಿನ್ನೆಲೆಯಲ್ಲಿಯೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೂ ಕೂಡ ಇಂದು ಸಂಜೆ ಪರಮೇಶ್ವರ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ