ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ

ಶುಕ್ರವಾರ, 30 ಜನವರಿ 2015 (15:09 IST)
ರಾಜ್ಯದ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರ ನೇತೃತ್ವದಲ್ಲಿ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯನ್ನು ಆರಂಭವಾಗಿದ್ದು, ಸಂಪುಟ ಸದಸ್ಯರು ಭಾಗಿಯಾಗಿದ್ದಾರೆ. 
 
ಸಭೆ ಇನ್ನೂ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಅರ್ಕಾವತಿ ಬಡವಣೆಗೆ ಸಂಬಂಧಿಸಿದ ಅಕ್ರಮ ಡಿ ನೋಚಿಫಿಕೇಶನ್ ಪ್ರಕರಣ, ಸರ್ಕಾರದಲ್ಲಿನ ಆಗು-ಹೋಗುಗಳು, ಸತೀಶ್ ಜಾರಕಿಹೋಳಿ ಅವರ ರಾಜೀನಾಮೆ ವಿಚಾರ, ಕೆಡಿಪಿ ಸಭೆ ಹಾಗೂ ಸಚಿವರ ಕಾರ್ಯ ವೈಖರಿ  ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್, ಆಹಾರ ಮತ್ತ ನಾಗರೀಕ ಸರಬರಾಜು ಸಚಿವ ದಿನೇಶ್ ಗುಂಡೂ ರಾವ್, ನಗರಾಭಿವೃದ್ದಿ ಸಚಿವ ವಿನಯ್ ಕುಮಾರ್ ಸೊರಕೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಮೈಸೂರು ಉಸ್ತುವಾರಿ ಸಚಿವ ಹೆಚ್.ಎಸ್. ಮಹಾದೇವ ಪ್ರಸಾದ್ ಸೇರಿದಂತೆ ಇನ್ನಿತೆರೆ ಸಂಪುಟ ಸಚಿವರು ಪಾಲ್ಗೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ