ಸಿಎಂ ಸಿದ್ದರಾಮಯ್ಯರಿಂದ ಕಾಂಗ್ರೆಸ್ ಅಧೋಗತಿಯತ್ತ: ಮನವಳ್ಳಿ

ಗುರುವಾರ, 27 ನವೆಂಬರ್ 2014 (15:48 IST)
ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿ ದಿನೇ ದಿನೇ ಕ್ಷಿಣಿಸುತ್ತಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲ ಕಾಂಗ್ರೆಸಿಗರನ್ನು ತುಳಿಯುತ್ತಿದ್ದಾರೆ ಎಂದು ಬೆಂಗಳೂರು ಕೆಪಿಸಿಸಿ ಸದಸ್ಯ ಶಂಕರ ಮನವಳ್ಳಿ ಆರೋಪಿಸಿದ್ದಾರೆ.
 
ನಿಗಮ ಮಂಡಳಿಯಲ್ಲಿ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಕೆಂಡಾಮಂಡಲರಾದ ನಿಷ್ಠಾವಂತ ಕಾಂಗ್ರೆಸ್ಸಿಗರು ಸುದ್ದಿಗೋಷ್ಠಿ ನಡೆಸಿ, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ನಿಗಮ ಮಂಡಳಿಗಳಿಗೆ 18 ತಿಂಗಳ ಅವಧಿ ನಿಗದಿ ಮಾಡಿದ್ದಾರೆ.ಸಿಎಂ ಸ್ಥಾನಕ್ಕೂ ಇದೇ ಸೂತ್ರವನ್ನು ಅನುಸರಿಸಲಿ. 18 ತಿಂಗಳ ಬಳಿಕ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯಿಲಿ ಎಂದು ಟೀಕಿಸಿದ್ದಾರೆ.
 
ಲಿಂಗಾಯುತ ಮುಖಂಡರನ್ನು ತುಳಿಯಲು ಸಿದ್ದಾರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದಲ್ಲಿ ವೀರಶೈವ ಸಮಾಜ ಬೀದಿಗಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ಸದಸ್ಯ ಶಂಕರ ಮನವಳ್ಳಿ ಎಚ್ಚರಿಕೆ ನೀಡಿದ್ದಾರೆ.
 
 
ಡಾ.ಪರಮೇಶ್ವರ್ ಸೋಲಿಗೆ ಸಿದ್ದರಾಮಯ್ಯ ನೇರ ಕಾರಣವಾಗಿದ್ದಾರೆ. ಪರಮೇಶ್ವರ್ ಸಿಎಂ ಆಗ್ತಾರೆ ಎನ್ನುವ ಕಾರಣಕ್ಕೆ ಅವರನ್ನು ಸಿದ್ದರಾಮಯ್ಯ ಪರೋಕ್ಷವಾಗಿ ಷಡ್ಯಂತ್ರ ನಡೆಸಿ ಸೋಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
 
 

ವೆಬ್ದುನಿಯಾವನ್ನು ಓದಿ