ಕಾಂಗ್ರೆಸ್ ಸಮನ್ವಯ ಸಭೆ: ಸಚಿವ ಅಂಬರೀಶ್ ವಿರುದ್ಧ ದೂರುಗಳ ಸುರಿಮಳೆ

ಶನಿವಾರ, 31 ಜನವರಿ 2015 (18:13 IST)
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ಸಮನ್ವಯ ಸಭೆ ನಡೆಯುತ್ತಿದ್ದು, ಪಕ್ಷದ ಕೆಲ ಶಾಸಕರು ವಸತಿ ಸಚಿವ ಅಂಬರೀಶ್ ವಿರುದ್ಧ ದೂರುಗಳ ಸುರಿಮಳೆಗೈದಿದ್ದಾರೆ.
 
 ಸಚಿವ ಅಂಬರೀಷ್ ಅವರ ಮಾತಿನ ದಾಟಿ ಸರಿಯಿಲ್ಲ, ಸಚಿವರಾಗಿ ಅವರ ವರ್ತನೆಯನ್ನು ಸಹಿಸಿಕೊಳ್ಳಲಾಗದು ಎಂದು  ಕೆಲ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ.  
 
ಶಾಸಕರು ಸಭೆಯ ನೇತೃತ್ವ ವಹಿಸಿದ್ದ ಸಿಂಗ್ ಅವರಿಗೆ ಈ ರೀತಿ ದೂರು ಸಲ್ಲಿಸಿದ್ದು, ಅವರ ಮಾತಿನ ದಾಟಿ ಸರಿ ಇಲ್ಲ.  ಸಚಿವರಾಗಿ ನಮ್ಮೊಂದಿಗೇ ಹಾಗೇ ವರ್ತಿಸುತ್ತಾರೆ. ಇನ್ನು ಸಾರ್ವಜನಿಕರೆದುರು ಹೇಗೆ ಎಂಬ ಅನುಮಾನ ಮೂಡುವುದು ಸಹಜ ಎಂದು ದೂರಿದ್ದಾರೆ. 
 
ಈ ಹಿಂದೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಹೀಗೆಯೇ ವರ್ತಿಸಿದ್ದ ಕಾರಣ ಪಕ್ಷದ ಹೈಕಮಾಂಡ್ ಗೆ ಪತ್ರ ಬರೆದು ಸಚಿವ ಅಂಬರೀಶ್ ಅವರಿಗೆ ಬದ್ದಿ ಹೇಳಿಕೊಡಿ ಎಂದು ಸುಮಾರು 150ಕ್ಕೂ ಹೆಚ್ಚು ಕಾರ್ಯಕರ್ತರು ಸಹಿ ಹಾಕುವ ಮೂಲಕ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದನ್ನು ನೆನಪಿಸಿಕೊಳ್ಳಬಹುದು. 
 
ಇನ್ನು ಶಾಸಕರೊಂದಿಗೆ ಅಭಿಪ್ರಾಯ ಸಂಗ್ರಹಿಸಿದ ಬಳಿಕ ರಾಜ್ಯದಲ್ಲಿನ 22 ನಿಗಮ ಮಂಡಳಿಗಳ ಅಧ್ಯಕ್ಷರೊಂದಿಗೂ ಕೂಡ ಸಿಂಗ್ ಚರ್ಚಿಸಿದ್ದು, ಕಾರ್ಯ ಚಟುವಟಿಕೆಗಳನ್ನು ಹೇಗೆ ಜಾಗರೂಕರಾಗಿ ನಿರ್ವಹಿಸಬೇಕು ಎಂಬ ಬಗ್ಗೆ ತಿಳಿ ಹೇಳಿದ್ದಾರೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ