ಕಳಸಾ ಬಂಡೂರಿ ಯೋಜನೆಗೆ ಸರಕಾರ ಬದ್ಧ: ಎಚ್‌.ಕೆ.ಪಾಟೀಲ್

ಶುಕ್ರವಾರ, 28 ಆಗಸ್ಟ್ 2015 (19:40 IST)
ರಾಜ್ಯದಲ್ಲಿ ಅಡಳಿತರೂಢವಾಗಿರುವ ಕಾಂಗ್ರೆಸ್ ಸರಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತದೆ. ಆದರೆ, ಬಿಜೆಪಿ ಯೋಜನೆಯ ವಿರುದ್ಧವಾಗಿದೆ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಚ್‌.ಕೆ.ಪಾಟೀಲ್ ಹೇಳಿದ್ದಾರೆ.
 
ಮಹದಾಯಿ ಯೋಜನೆ ಜಾರಿಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಲು ಬದ್ದವಾಗಿದೆ. ಆದರೆ, ಬಿಜೆಪಿ ಜನರ ಮನಸ್ಸನ್ನು ಕೆಡಿಸುಂತಹ ಕೃತ್ಯ ಎಸಗುತ್ತಿದೆ ಎಂದು ಆರೋಪಿಸಿದರು.
 
ಸರ್ವಪಕ್ಷಗಳ ಸಭೆ ದೆಹಲಿಗೆ ಹೋದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅಡ್ಡಗೋಡೆಯ ಮೇಲೆ ದ್ವೀಪವಿಟ್ಟಂತೆ ಮಾತನಾಡಿರುವುದು ಉತ್ತರ ಕರ್ನಾಟಕ ಜನತೆ ರೊಚ್ಚಿಗೇಳಲು ಕಾರಣವಾಗಿದೆ ಎಂದರು.
 
ಕಳಸಾ ಬಂಡೂರಿ ಯೋಜನೆ ಜಾರಿಗೆ ಬಿಜೆಪಿ ಸಿದ್ಧವಾಗದಿದ್ದಲ್ಲಿ ಮುಂಬರುವ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ. ಕೂಡಲೇ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ಯೋಜನೆ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಬಾರಿ ದೆಹಲಿಗೆ ಸರ್ವಪಕ್ಷಗಳ ಸಭೆ ಕರೆದೊಯ್ಯಲು ಚಿಂತನೆ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ಯೋಜನೆ ಜಾರಿಗೆ ಕಟಿಬದ್ಧವಾಗಿದೆ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಚ್‌.ಕೆ.ಪಾಟೀಲ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ