ಸರ್ಕಾರಿ ಉದ್ಯೋಗದಲ್ಲಿ ಶೇ. 3ರಷ್ಟು ಮಹಿಳಾ ಮೀಸಲಾತಿ ಹೆಚ್ಚಿಸಿದ ಕಾಂಗ್ರೆಸ್ ಸರ್ಕಾರ

ಗುರುವಾರ, 8 ಅಕ್ಟೋಬರ್ 2015 (14:19 IST)
ಈ ಹಿಂದೆ ರಾಜ್ಯ ಸರ್ಕಾರದ ಉದ್ಯೋಗ ಮೀಸಲಾತಿಯಲ್ಲಿ ಮಹಿಳೆಯರಿಗೆ ಕೇವಲ ಶೇ.30ರಷ್ಟು ಮಾತ್ರ ಮೀಸಲಾತಿ ಇದ್ದುದನ್ನು ಪ್ರಸ್ತುತ ಶೇ.33ಕ್ಕೆ ಏರಿಸುವ ಮೂಲಕ ಸರ್ಕಾರವು ಇಂದು ರಾಜ್ಯದ ಉದ್ಯೋಗಾಕಾಂಕ್ಷಿ ಮಹಿಳೆಯರಿಗೆ ಸಂತೋಷಕರ ಸುದ್ದಿಯನ್ನು ರವಾನಿಸಿದೆ. 
 
ಹೌದು, ರಾಜ್ಯ ಸರ್ಕಾರವು ಇಂದು ತನ್ನ ರಾಜ್ಯ ಪತ್ರದಲ್ಲಿ ಇಂದು ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಈ ಹಿಂದೆ ಇದ್ದ ಶೇ.30ನ್ನು ಶೇ.33ಕ್ಕೆ ಏರಿಸುವ ಮೂಲಕ ಶುಭ ಸಂದೇಶವನ್ನು ರವಾನಿಸಿದೆ. 
 
ಇನ್ನು ಮಹಿಳಾ ಮೀಸಲಾತಿ ಸಂಬಂಧ ಪರಿಶೀಲಿಸಲು ಸರ್ಕಾರ ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಮಾಲಿಕಯ್ಯ ಗುತ್ತೇದಾರ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲಿಸಿದ್ದ ಸಮಿತಿ ಶೇ.3ರಷ್ಟನ್ನು ಏರಿಕೆ ಮಾಡಬೇಕೆಂದು ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಇಂದು ಅಧಿಕೃತವಾಗಿ ಏರಿಕೆ ಮಾಡಿ ಆದೇಶಿಸಿದೆ. 

ವೆಬ್ದುನಿಯಾವನ್ನು ಓದಿ