ಆನ್‌ಲೈನ್ ಪಾವತಿ ವಿರೋಧಿಸಿ ಬಿಬಿಎಂಪಿ ಗುತ್ತಿಗೆದಾರರ ಪ್ರತಿಭಟನೆ

ಸೋಮವಾರ, 22 ಡಿಸೆಂಬರ್ 2014 (13:56 IST)
ಇನ್ನು ಮುಂದೆ ಗುತ್ತಿಗೆದಾರರು ಪಾವತಿಸಬೇಕಾದ ಬಿಲ್‌ನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅಧಿನಿಯಮವನ್ನು ಹೊರಡಿಸಿದ್ದು, ಇದನ್ನು ವಿರೋಧಿಸಿ ಗುತ್ತಿಗೆದಾರರು ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆಯನ್ನು ನಡೆಸಿದರು. 
 
ಆನ್ ಲೈನ್ ಮೂಲಕ ಪಾವತಿಸಬೇಕಾದರೆ ವಿದ್ಯುತ್ ಸಮಸ್ಯೆ, ತಾಂತ್ರಿಕ ಸಮಸ್ಯೆ, ಅಂತರ್ಜಾಲ ಸಮಸ್ಯೆ, ಆಪರೇಟಿಂಗ್ ಸಮಸ್ಯೆ ಸೇರಿದಂತೆ ಇನ್ನಿತರೆ ಸಮಸ್ಯೆಗಳು ಉದ್ಬವಿಸುತ್ತವೆ. ಹಾಗಾಗಿ ಹಿಂದಿನ ಪಾವತಿ ನೀತಿಯನ್ನೇ ಅನುಸರಿಸಬೇಕು. ಅಥವಾ ಗುತ್ತಿಗೆದಾರರೊಂದಿಗೆ ಮತ್ತೊಮ್ಮೆ ಸೂಕ್ತ ಚರ್ಚೆ ನಡೆಸಿ ಆ ಬಳಿಕ ನಿರ್ಧಾರ ಕೈಗೊಳ್ಳುವಂತೆ ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಒತ್ತಾಯಿಸಿದ್ದಾರೆ.
 
ಇನ್ನು ಪ್ರತಿಭಟನಾನಿರತ ಗುತ್ತಿಗೆದಾರರು, ಪಾಲಿಕೆಯ ಆಡಳಿತ ಪಕ್ಷದ ಸದಸ್ಯ ಎನ್.ಆರ್.ರಮೇಶ್ ಹಾಗೂ ಆಯುಕ್ತ ಎಂ.ಡಿ. ಲಕ್ಷ್ಮಿನಾರಾಯಣ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಪಾಲಿಕೆಯ ಪೌರಾಯುಕ್ತೆ ಶಾಂತಕುಮಾರಿ ನೇತೃತ್ವದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ