ಪ್ರೇಮಲತಾ ಬಣವಿ ಮೇಲೆ ಭ್ರಷ್ಟಾಚಾರದ ಆರೋಪವಿದ್ದರೂ ಬಿಎಂಟಿಸಿಗೆ ಬಡ್ತಿ

ಬುಧವಾರ, 25 ನವೆಂಬರ್ 2015 (11:32 IST)
ಹುಬ್ಬಳ್ಳಿಯ ವಾಯುವ್ಯ ಸಾರಿಗೆ ಸಂಸ್ಥೆಯ ಅಧಿಕಾರಿ ಪ್ರೇಮಲತಾ ಬಣವಿ ಭ್ರಷ್ಟಾಚಾರದ ಆರೋಪ ಹೊತ್ತಿದ್ದರೂ ಅವರನ್ನು ಅಮಾನತು ಮಾಡುವುದನ್ನು ಬಿಟ್ಟು ಬೆಂಗಳೂರು ಬಿಎಂಟಿಸಿಗೆ ಮುಖ್ಯ ಕಾನೂನು ಇಲಾಖೆ ಅಧಿಕಾರಿಯಾಗಿ ಬಡ್ತಿ ನೀಡಲಾಗಿದೆಯೆಂಬ ಆರೋಪ ಕೇಳಿಬಂದಿದೆ.  ಕಳೆದ 8 ವರ್ಷಗಳಲ್ಲಿ ಸಾಕಷ್ಟು ಅವ್ಯವಹಾರಗಳನ್ನು ನಡೆಸಿದ್ದಾರೆ ಮತ್ತು ಸ್ವಜನಪಕ್ಷಪಾತದ ಆರೋಪವೂ ಅವರ ಮೇಲಿದೆ.

ಪ್ರೇಮಲತಾ ಬಣವಿ ವಿರುದ್ಧ 21 ಪ್ರಕರಣಗಳಲ್ಲಿ ಆರೋಪ ಹೊತ್ತಿದ್ದು, 9 ದೂರುಗಳಲ್ಲಿ ಅಕ್ರಮ ಸಾಬೀತಾಗಿವೆ.  ಪ್ರೇಮಲತಾ ತಮ್ಮ ತಂಗಿಯನ್ನೇ ಸಂಸ್ಥೆಯ ವಕೀಲರನ್ನಾಗಿ ಮಾಡಿದ್ದರು. ತನಿಖಾ ವರದಿ ಕೈಸೇರಿ 6 ತಿಂಗಳಾದರೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ.  ಈ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಕೇಳಿದಾಗ ನಮಗೆ ಹೇಗೆ ಅವೆಲ್ಲಾ ಗೊತ್ತಾಗಬೇಕು.  ಸುಮ್ಮನೇ ನಮ್ಮ ಮೇಲೇಕೆ ಆರೋಪ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

 ಪ್ರೇಮಲತಾ ಯಾರು, ಏನು ಎನ್ನುವುದೇ ನಮಗೆ ಗೊತ್ತಿಲ್ಲ, ಏನಾದರೂ ದೂರಿದ್ದರೆ ನಮಗೆ ಕೊಡಿ, ನಾವು ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು. 

ವೆಬ್ದುನಿಯಾವನ್ನು ಓದಿ