ಕೆಲವು ನಾಯಿಗಳು ಬರ್ತಾವೇ ಬಿಸ್ಕಿಟ್ ಹಾಕಿ: ಭ್ರಷ್ಟ ಗುತ್ತಿಗೆದಾರನಿಗೆ ಭ್ರಷ್ಟ ತಹಶೀಲ್ದಾರ್‌ನ ಸಲಹೆ

ಮಂಗಳವಾರ, 31 ಮೇ 2016 (14:23 IST)
ಕೆಲವು ನಾಯಿಗಳು ಬರ್ತಾವೇ ಬಿಸ್ಕೆಟ್ ಹಾಕಿ ನೀರು ಕುಡಿಸಿ ಎಂದು ಗುತ್ತಿಗೆದಾರನೊಬ್ಬನಿಗೆ ತಹಶೀಲ್ದಾರರು ಸೂಚನೆ ನೀಡಿರುವ ಘಟನೆ ರಾಯಚೂರಿನ ಬರೋಲಿ ಗ್ರಾಮದಲ್ಲಿ ನಡೆದಿದೆ.
 
ದೇವಸ್ಥಾನದಲ್ಲಿ ತೆಂಗಿನ ಕಾಯಿ ಮಾರಾಟ ಮಾಡುವ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಹೆಚ್ಚಿನ ಹಣಕ್ಕೆ ತೆಂಗಿನಕಾಯಿಗಳನ್ನು ಮಾರಾಟ ಮಾಡುತ್ತಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಗ್ರಾಮಸ್ಥರು, ತಹಶೀಲ್ದಾರ್ ಎಸ್‌.ಟಿ.ಪುರೆ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ದೂರು ನೀಡಿ, ಗುತ್ತಿಗೆದಾರನಿಗೆ ಬುದ್ದಿ ಹೇಳಿ ಎಂದು ಭಕ್ತರೊಬ್ಬರು ತಮ್ಮ ಮೊಬೈಲ್‌ನ್ನು ಗುತ್ತಿಗೆದಾರನ ಬಳಿ ನೀಡಿದ್ದಾರೆ.
 
ತಹಶೀಲ್ದಾರರು ಗುತ್ತಿಗೆದಾರನ ಜೊತೆ ಪೋನಿನಲ್ಲಿ ಮಾತನಾಡಿ ಡೈರೆಕ್ಟ್ ಆಗಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಡಬೇಡ, ಕೆಲವು ನಾಯಿಗಳು ಬರ್ತಾವೆ, ಬಿಸ್ಕಿಟ್ ಹಾಕಿ ನೀರು ಕುಡಿಸಿ ಎಂದು ಗುತ್ತಿಗೆದಾರನ ಪರವಹಿಸಿ ಮಾತನಾಡಿ ಅನಾಗರಿಕತೆಯನ್ನು ಮೆರೆದಿದ್ದಾರೆ. 
 
ತಹಶೀಲ್ದಾರ ಮತ್ತು ಗುತ್ತಿಗೆದಾರನ ಸಂಭಾಷಣೆ ಭಕ್ತರ ಮೊಬೈಲ್ ಪೋನ್‌ನಲ್ಲಿ ರೆಕಾರ್ಡ್ ಆಗಿದೆ. ಈ ಸಂಭಾಷಣೆಯ ವಿವರಗಳನ್ನು ತೆಗೆದುಕೊಂಡು ಭಕ್ತಾಧಿಗಳು ರಾಯಚೂರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ