ವಿಧಾನಪರಿಷತ್ ಚುನಾವಣೆಗೆ ರಮ್ಯಾ ಅಭ್ಯರ್ಥಿಯೇ?

ಶನಿವಾರ, 28 ನವೆಂಬರ್ 2015 (12:10 IST)
ಡಿ.27ರಂದು ನಡೆಯುವ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ  ಮಾಜಿ ಲೋಕಸಭೆ ಸದಸ್ಯೆ, ಚಿತ್ರನಟಿ ರಮ್ಯಾ ಆಯ್ಕೆ ಬಹುತೇಕ ಖಚಿತವಾಗಿತ್ತು.  ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಡಿ.ಕೆ.ಶಿವಕುಮಾರ್ ಮನೆಯಲ್ಲಿ ಸಭೆ ಕರೆದಿದ್ದರು.ಡಿಕೆಶಿ ನೇತೃತ್ವದ ಸಭೆ ಬಳಿಕ ರಮ್ಯಾ ಪತ್ರಕರ್ತರೊಂದಿಗೆ ಮಾತನಾಡುತ್ತಾ ನಾನು ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲ್ಲ. ನಾನು ಟಿಕೆಟ್ ಆಕಾಂಕ್ಷಿಯಲ್ಲ, ಅರ್ಜಿ ಕೂಡ ಹಾಕಿಲ್ಲ ಎಂದಿದ್ದಾರೆ. 

ಸಚಿವ ಅಂಬರೀಷ್, ಮಾಜಿ ಸಚಿವೆ ರಮ್ಯಾ ಮತ್ತು ಆತ್ಮಾನಂದ್, ಶಿವರಾಮೇಗೌಡ ಭಾಗಿಯಾಗಿದ್ದರು. ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲು ಕೆಪಿಸಿಸಿ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಈ ಸಭೆ ಸೇರಲಾಗಿತ್ತು.  ರಮ್ಯಾ ಅವರಿಗೆ ವಿಧಾನಪರಿಷತ್ ಚುನಾವಣೆಗೆ ಟಿಕೆಟ್ ನೀಡಬೇಕೋ ಬೇಡವೋ ಎಂಬ ಕುರಿತು ಚರ್ಚೆ ನಡೆಯಿತು. ಅವರಿಗೆ ಟಿಕೆಟ್ ಕೊಡಲು ಯತ್ನಿಸಿದರೆ ಅಂಬರೀಷ್ ಬಣ ವಿರೋಧಿಸುತ್ತದೆಂಬ ಕಾರಣದಿಂದ ಇಬ್ಬರನ್ನೂ ಒಟ್ಟಿಗೆ ಸೇರಿಸಿ ಸಂಧಾನ ನಡೆಸುವ ಉದ್ದೇಶದಿಂದ ಈ ಸಭೆ ಕರೆಯಲಾಗಿತ್ತು. 

 ಲೋಕಸಭೆ ಚುನಾವಣೆಯಲ್ಲಿ ಸೋತಮೇಲೆ ಒಂದು ವರ್ಷದವರೆಗೆ ರಾಜಕೀಯದಿಂದ ಮರೆಯಾಗಿ ವಿದೇಶಕ್ಕೆ ತೆರಳಿದ್ದ ರಮ್ಯಾ, ಮತ್ತೆ ಮಂಡ್ಯದ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹೀಗಾಗಿ ಡಿ.27ರಂದು ನಡೆಯುವ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಆಯ್ಕೆ ಬಹುತೇಕ ಖಚಿತವಾಗಿತ್ತು. ಆದರೆ ರಮ್ಯಾ ತಾನು  ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲ್ಲ. ನಾನು ಟಿಕೆಟ್ ಆಕಾಂಕ್ಷಿಯಲ್ಲ, ಅರ್ಜಿ ಕೂಡ ಹಾಕಿಲ್ಲ ಎಂದು ಹೇಳಿರುವುದರಿಂದ ವಿಧಾನಪರಿಷತ್ ಚುನಾವಣೆಗೆ ಮಂಡ್ಯ ಅಭ್ಯರ್ಥಿ ಯಾರಾಗಬಹುದು ಎಂದು ಕುತೂಹಲ ಕೆರಳಿಸಿದೆ. ಸಭೆಯಲ್ಲಿ ನಾಯಕರ ನಡುವೆ ಒಮ್ಮತ ಮೂಡದಿದ್ದರಿಂದ ಅಭ್ಯರ್ಥಿಯ ಆಯ್ಕೆ ಅಂತಿಮವಾಗಿಲ್ಲ ಎಂದು ಡಿಕೆಶಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ