ಪತ್ನಿ ತಂಗಿ ಮೇಲಿನ ಆಸೆಗೆ ಪತ್ನಿಯನ್ನೇ ಕೊಂದ ಪತಿ

ಶುಕ್ರವಾರ, 17 ಫೆಬ್ರವರಿ 2017 (12:59 IST)
ಪತ್ನಿ ತಂಗಿ ಮೇಲಿನ ಆಸೆಯಿಂದ ಪತ್ನಿಯನ್ನೇ ಕೊಂದ ಪತಿ ಚಂದ್ರುನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
ಜಿಲ್ಲೆಯ ಮುಧೋಳನ ಚಿಚಖಂಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪತ್ನಿ ಹಾವು ಕಚ್ಚಿದ್ದರಿಂದ ಸಾವನ್ನಪ್ಪಿದ್ದಾಳೆ ಎನ್ನುವ ವಿಫಲ ಪ್ರಯತ್ನ ನಡೆಸಿದ್ದಾನೆ.
 
 ಫೆಬ್ರವರಿ 14 ರಂದು 25 ವರ್ಷದ ರತ್ನವ್ವ ಎನ್ನುವ ಮಹಿಳೆ ಸಾವನ್ನಪ್ಪಿದ್ದಳು. ಹಾವು ಕಡಿದಿದ್ದರಿಂದ ಸಾವನ್ನಪ್ಪಿದ್ದಾಳೆ ಎಂದು ಪತಿ ಪೊಲೀಸರಿಗೆ ಮಾಹಿತಿ ನೀಡಿದ್ದನು.
 
ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಪತ್ನಿಯ ಕತ್ತು ಹಿಸುಕಿ ಸಾಯಿಸಿರುವುದು ಬಹಿರಂಗವಾಗಿತ್ತು. ಪೊಲೀಸರು ಪತಿಯನ್ನು ತಮ್ಮದೇ ಆದ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಪತ್ನಿ ತಂಗಿ ಮೇಲಿನ ಆಸೆಯಿಂದ ಪತ್ನಿಯನ್ನೇ ಕೊಂದಿದ್ದಾಗಿ ಬಾಯಿ ಬಿಟ್ಟಿದ್ದನು.
 
ಆರೋಪಿ ಪತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ