ಪರಿಹಾರಕ್ಕಾಗಿ ಬೆಳೆ ಉತ್ಪಾದನಾ ವೆಚ್ಚದ ಅಧ್ಯಯನ: ಕೃಷ್ಣಭೈರೇಗೌಡ

ಮಂಗಳವಾರ, 31 ಮಾರ್ಚ್ 2015 (15:50 IST)
ರಾಜ್ಯ ಕೃಷಿ ಬೆಲೆ ಆಯೋಗವು ರೈತರ ಬೆಳೆಗಳ ಉತ್ಪಾದನಾ ವೆಚ್ಚದ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ರೈತರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದಾರೆ. 
 
ವಿಧಾನ ಪರಿಷತ್‌ ಕಲಾಪದಲ್ಲಿ ರೈತರ ಸಂಕಷ್ಟಗಳಿಗೆ ಪರಿಹಾರ ಒದಗಿಸಲು ಸರ್ಕಾರ ಯಾವ ರೀತಿಯ ಕ್ರಮ ಕೈಗೊಂಡಿದೆ ಎಂದು ಬಿಜೆಪಿ ಸದಸ್ಯ ರಾಮಚಂದ್ರೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರ ಈಗಾಗಲೇ ಇಲಾಖೆ ಅಡಿಯಲ್ಲಿ ರೈತರ ಸುಧಾರಣೆಗಾಗಿಯೇ ಕಳೆದ ವರ್ಷ ಕೃಷಿ ಬೆಲೆ ಆಯೋಗವನ್ನು ರಚಿಸಿದ್ದು, ಅದೇ ಆಯೋಗವು ರೈತರ ಬೆಳೆ ಉತ್ಪಾದನೆ ಬಗ್ಗೆಯೂ ಅಧ್ಯಯನ ನಡೆಸಲಿದೆ. ಅಧ್ಯಯನದ ವರದಿ ಬಂದ ಬಳಿಕ ಪರಿಹಾರ ಅಥವಾ ಮುಂದಿನ ಕ್ರಮಗಳನ್ನು  ಕೈಗೊಳ್ಳಲಾಗುವುದು ಎಂದರು. 
 
ಬಳಿಕ ಮಾತನಾಡಿದ ಅವರು ಆಯೋಗವನ್ನು ರಾಜ್ಯ ಸರ್ಕಾರ ಕಳೆದ ವರ್ಷ ರಚಿಸಿದ್ದರೂ ಕೂಡ ಸಿಬ್ಬಂದಿಯ ಕೊರತೆಯನ್ನೆದುರಿಸುತ್ತಿತ್ತು. ಆದರೆ ಪ್ರಸ್ತುತ ಅಗತ್ಯ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಪ್ರಸಕ್ತ ವರ್ಷವೇ ಅಧ್ಯಯನ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ವರದಿ ಸಲ್ಲಿಕೆಯಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. 

ವೆಬ್ದುನಿಯಾವನ್ನು ಓದಿ