ನಿರುದ್ಯೋಗಿಗಳಿಗೆ ಕೋಟ್ಯಂತರ ರೂ. ವಂಚನೆ: ಪೊಲೀಸರಿಂದ ದಾಳಿ

ಗುರುವಾರ, 30 ಅಕ್ಟೋಬರ್ 2014 (17:36 IST)
ಎಕ್ಸಲ್ಟ್  ಕನ್ಸಲ್ಟಿಂಗ್ ಪ್ಲೇಸ್‌ಮಂಟ್  ಸರ್ವೀಸಸ್ ಎಂಬ  ಕೇಂದ್ರ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ಪ್ರಕರಣ ವರದಿಯಾಗಿದೆ. ಶಿವಾಜಿನಗರದಲ್ಲಿ ಸ್ಥಾಪಿಸಲಾಗಿದ್ದ  ಕೇಂದ್ರ 13, 947 ಜನರಿಂದ ಹಣ ಪಡೆದು ವಂಚಿಸಿದ್ದಾರೆಂದು ದೂರಲಾಗಿದೆ. ನಿರುದ್ಯೋಗಿಗಳಿಂದ ತಲಾ 2.75 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ್ದಾರೆಂದು ತಿಳಿದುಬಂದಿದೆ.

ದೆಹಲಿ ಮೂಲದ ನಿರುದ್ಯೋಗಿ ಈ ಮೇಲ್ ಮೂಲಕ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಕನ್ಸಲ್ಟೆನ್ಸಿ ಮ್ಯಾನೇಜರ್ ಮಹಮದ್ ಶಕೀಲ್ ಮತ್ತು ಜೇಮ್ಸ್ ಎಂಬಿಬ್ಬರನ್ನು ಬಂಧಿಸಿದ್ದಾರೆ.

 5ಸಾವಿರದಿಂದ 9 ಸಾವಿರದವರೆಗೆ ಪ್ರತಿಯೊಬ್ಬ ನಿರುದ್ಯೋಗಿಯಿಂದ ಹಣ ಪಡೆದುಕೊಂಡು ಸುಮಾರು 2 ಕೋಟಿ ರೂ. 75 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಸಂಗ್ರಹಿಸಿ ನಿರುದ್ಯೋಗಿಗಳಿಗೆ ವಂಚಿಸಿದ್ದಾರೆಂದು ಹೇಳಲಾಗಿದೆ. ಪೊಲೀಸರು ದಾಳಿಯಲ್ಲಿ 37 ಕಂಪ್ಯೂಟರ್, 45 ಲ್ಯಾಪ್‌ಟಾಪ್, ಲ್ಯಾಂಡ್‌ಲೈನ್‌ಗಳು ಮತ್ತಿತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ