ಕಸ್ಟಮ್ಸ್ ಅಧಿಕಾರಿಗಳಿಂದ 32 ಕೋಟಿ ರೂಪಾಯಿ ಮೌಲ್ಯದ ಚಿನ್ನ ವಶ

ಸೋಮವಾರ, 15 ಸೆಪ್ಟಂಬರ್ 2014 (13:46 IST)
ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಸೆ. 14 ರಂದು ದುಬೈನಿಂದ ಆಗಮಿಸಿದ ವಿಮಾನ ಯಾನಿಯಿಂದ ಅಕ್ರಮವಾಗಿ ಸಾಗಿಸಿದ್ದ 1166. 700 ಗ್ರಾಂ ತೂಕದ 31,73,424 ರೂ. ಮೌಲ್ಯದ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.
 
ಬೆಳಗ್ಗೆ 8.45 ಕ್ಕೆ ಬಂದಿಳಿದ ಜೆಟ್‌ ಏರ್‌ವೆàಸ್‌ ವಿಮಾನದಲ್ಲಿ ಈ ಚಿನ್ನ ಪತ್ತೆಯಾಗಿದೆ.
 
ಚಿನ್ನವನ್ನು 2 ಪ್ಯಾಕೆಟ್‌ಗಳಲ್ಲಿ ಕಪ್ಪು ಇನ್ಸುಲೇಶನ್‌ ಟ್ಯಾಪ್‌ಗ್ಳಲ್ಲಿ ಸುತ್ತಿ ಅದನ್ನು ವಿಮಾನದ ಹಿಂಬದಿಯ ಶೌಚಾಲಯದ ಕನ್ನಡಿಯ ಹಿಂಬದಿ ಬಚ್ಚಿಡಲಾಗಿತ್ತು. ಪ್ರತೀ ಪ್ಯಾಕೆಟ್‌ನಲ್ಲಿ ತಲಾ 5 ಚಿನ್ನದ ಬಿಸ್ಕಿಟ್‌ಗಳಿದ್ದವು. ಆದರೆ ಈ ಚಿನ್ನವನ್ನು ಇರಿಸಿದ್ದು ಯಾರು ಎನ್ನುವುದು ಗೊತ್ತಾಗಿಲ್ಲ.
 
ಕಳೆದ ಒಂದು ವಾರದ ಅವಧಿಯಲ್ಲಿ 1 ಕೆ.ಜಿ.ಗಿಂತ ಅಧಿಕ ಪ್ರಮಾಣದ ಚಿನ್ನ ಪತ್ತೆಯಾದ ಎರಡನೇ ಪ್ರಕರಣ ಇದಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.
 
ವಿಮಾನದ ಶೌಚಾಲಯದ ಹಿಂಬದಿಯ ಕನ್ನಡಿಯ ಹಿಂಬದಿ ಇರಿಸಿ ಚಿನ್ನವನ್ನು ತರುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ವರ್ಷದ ಹಿಂದೆ ವಿಮಾನದ ಸೀಟಿನ ಅಡಿ ಭಾಗದಲ್ಲಿ ಚಿನ್ನ ಇಟ್ಟು ಹೋದ ಪ್ರಕರಣ ವರದಿಯಾಗಿತ್ತು. ಜೆಟ್‌ ಏರ್‌ವೆàಸ್‌ ವಿಮಾನ ದುಬಾೖನಿಂದ ಬಂದ ಬಳಿಕ ಮುಂಬಯಿಗೆ ಹೋಗುತ್ತಿದ್ದು, ಅಲ್ಲಿ ದೇಶೀಯ ಪ್ರಯಾಣಿಕರಾಗಿರುವ ಕಾರಣ ಹೆಚ್ಚಿನ ತಪಾಸಣೆ ಇರುವುದಿಲ್ಲ. ಹಾಗಾಗಿ ಈ ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಲು ಈ ರೀತಿಯ ತಂತ್ರಗಾರಿಕೆಯನ್ನು ಅನುಸರಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ