ಇಸ್ಕಾನ್ ಊಟವನ್ನು ನಿರಾಕರಿಸಿದ ಡಿ.ಜೆ. ಹಳ್ಳಿ ಶಾಲೆ

ಸೋಮವಾರ, 22 ಸೆಪ್ಟಂಬರ್ 2014 (10:50 IST)
ಡಿಜೆ ಹಳ್ಳಿ ಸರ್ಕಾರಿ ಉರ್ದುಶಾಲೆಯಲ್ಲಿ ಪೋಷಕರ ಒತ್ತಾಯದ ಮೇಲೆ ಶಾಲೆ ಇಸ್ಕಾನ್ ಊಟವನ್ನು ನಿರಾಕರಣೆ ಮಾಡಿದ ಘಟನೆ ನಡೆದಿದೆ. ಶಾಲೆಯಲ್ಲಿ ಇಸ್ಕಾನ್ ಊಟ ಸೇವಿಸಿ 150ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆಯಿಂದ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು.

ಆಸ್ಪತ್ರೆಗೆ ಸೇರಿದ್ದ ಮಕ್ಕಳು ಚಿಕಿತ್ಸೆ ಪಡೆದು ಹೊರ ಬಂದ ಮೇಲೆ ಮತ್ತೆ 30 ಮಕ್ಕಳು ಅಸ್ವಸ್ಥರಾಗಿದ್ದರು. ಶಾಲೆಯ ಊಟದಲ್ಲಿ ಹಲ್ಲಿ ಬಿದ್ದು ಆಹಾರ ವಿಷಯುಕ್ತವಾಗಿತ್ತೆಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಇನ್ನೂ ಒಂದು ವಾರದ ಕಾಲ ಇಸ್ಕಾನ್ ಊಟವನ್ನು ಕೊಡುವುದು ಬೇಡವೆಂದು ಪೋಷಕರು ಶಾಲೆಯ ಆಡಳಿತ ಮಂಡಳಿಗೆ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಇಸ್ಕಾನ್ ಇಂದು ಕೂಡ ಊಟ ಸರಬರಾಜು ಮಾಡಿದ್ದರೂ ಶಾಲೆ ಆಡಳಿತಮಂಡಳಿ ಅದನ್ನು ನಿರಾಕರಿಸಿ ವಾಪಸು ಕಳಿಸಿದೆ. 

ವೆಬ್ದುನಿಯಾವನ್ನು ಓದಿ