ಡಿವಿಎಸ್‌ ಪುತ್ರ ಕಾರ್ತಿಕ್‌ಗೆ ನೆನಪೆ ಇರುವದಿಲ್ಲವಂತೆ...!

ಗುರುವಾರ, 28 ಆಗಸ್ಟ್ 2014 (17:38 IST)
ವಂಚನೆ, ಅತ್ಯಾಚಾರ ಆರೋಪಗಳಲ್ಲಿ ಸಿಲುಕಿರುವ ಕೇಂದ್ರ ಸಚಿವ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರು ಅಲ್ಪಾವಧಿ ಮರೆವಿನಿಂದ ಬಳಲುತ್ತಿದ್ದು, 3 ದಿನಗಳ ಅಂತರದಲ್ಲಿ ಜ್ಞಾಪಕ ಕಳೆದುಕೊಳ್ಳುತ್ತಿದ್ದರು ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ.
 
2008 ಸೆಪ್ಟೆಂಬರ್ 14 ರಂದು ಮಣಿಪಾಲ್‌ನಿಂದ ಮಂಗಳೂರಿಗೆ ತೆರುಳುತ್ತಿದ್ದಾಗ ಪಡುಬಿದ್ರೆ ಬಳಿ ಕಾರ್ತಿಕ್ ಭೀಕರ ಅಪಘಾತಕ್ಕೀಡಾಗಿದ್ದರು. ಈ ಅಪಘಾತದಲ್ಲಿ ಕಾರ್ತಿಕ್ ಪ್ರಾಣಾಪಾಯದಿಂದ ಪಾರಾಗಿದ್ದರು ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಅಲ್ಪಾವಧಿ ಮರೆಗುಳಿತನದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.
 
ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಕಾರ್ತಿಕ್ 3 ತಿಂಗಳು ಕಾಲ ಕೋಮಾಗೆ ಜಾರಿದ್ದರು. ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದ ಕಾರ್ತಿಕ್ ಅನಂತರ ಅಲ್ಪಾವಧಿಯ ಮರೆವು ಸಮಸ್ಯೆಗೆ ಈಡಾಗಿದ್ದರು. ಹೀಗಾಗಿ ಮೂರು ದಿನಗಳ ಅಂತರದಲ್ಲಿ ಜ್ಞಾಪಕ ಕಳೆದುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.
 
ಅಪಘಾತ ಸಂಭವಿಸಿದ ಕೂಡಲೇ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಪಾವಧಿ ಮರೆವಿನಿಂದ ಬಳುತ್ತಿದ್ದ ಕಾರ್ತಿಕ್‌ಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಿಸಲಾಗಿತ್ತು.
 
ಸದಾನಂದಗೌಡ ಪುತ್ರ ಕಾರ್ತಿಕ್ ವಿರುದ್ಧ ವಂಚನೆ, ಅಪಹರಣ ಹಾಗೂ ಅತ್ಯಾಚಾರ ಆರೋಪವನ್ನು ನಟಿ ಮೈತ್ರಿಯಾಗೌಡ ಅವರು ಮಾಡಿದ್ದು, ಈ ಸಂಬಂಧ ಬೆಂಗಳೂರಿನ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ